Monday, July 1, 2024

ಕೈದಿಯೊಂದಿಗೆ ಲೇಡಿ ಡಾನ್ ಮದುವೆ: ಫುಲ್ ಟೈಟ್​ ಸೆಕ್ಯೂರಿಟಿ

ದೆಹಲಿ : ಜೈಲು ಕೈದಿಯೊಬ್ಬ ಕುಖ್ಯಾತ ಲೇಡಿ ಡಾನ್‌ನನ್ನು ಮದುವೆಯಾಗಿರುವ ಘಟನೆ ಮಂಗಳವಾರ ದೆಹಲಿಯಲ್ಲಿ ನಡೆದಿದೆ. ಈ ಮದುವೆಗಾಗಿ ಕೈದಿಗೆ ಪೆರೋಲ್ ಕೂಡ ಸಿಕ್ಕಿದೆ. ಮದುವೆಯಾಗುತ್ತಿರುವ ಆ ವಧು-ವರರ ಹೆಸರು ಕಲಾ ಜತೇಡಿ ಮತ್ತು ಅನುರಾಧಾ ಚೌಧರಿ. ಇದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಗ್ಯಾಂಗ್‌ಸ್ಟ‌ರ್ ಸಂದೀಪ್ ಅಲಿಯಾಸ್ ಕಲಾ ಜತೇಡಿ ಮತ್ತು ಲೇಡಿ ಡಾನ್ ಅನುರಾಧಾ ಚೌಧರಿ ಅಲಿಯಾಸ್ ಮೇಡಮ್ ಮಿಂಜ್ ಮಂಗಳವಾರ ದೆಹಲಿಯ ದ್ವಾರಕಾದಲ್ಲಿರುವ ಸಂತೋಷ್ ಪ್ಯಾಲೇಸ್‌ನಲ್ಲಿ ವಿವಾಹವಾಗಲಿದ್ದಾರೆ. ಇದಕ್ಕಾಗಿ ದೆಹಲಿ, ಹರಿಯಾಣ ಮತ್ತು ರಾಜಸ್ಥಾನದ ಪೊಲೀಸರು ಕಟ್ಟೆಚರ ವಹಿಸಿದ್ದಾರೆ. ‘ಲೇಡಿ ಡಾನ್’ ಅನುರಾಧ ತಾವೇ ಡ್ರೈವ್ ಮಾಡಿಕೊಂಡು ಬ್ಯಾಂಕ್ವೆಟ್ ಹಾಲ್ ತಲುಪಿದ್ದಾರೆ. ಮದುವೆಯ ಡ್ರೆಸ್ ಧರಿಸಿ, ಕಪ್ಪು ಕಾರಿನಲ್ಲಿ ಮದುವೆಗೆ ಆಗಮಿಸಿದ್ದರು.

ಇದನ್ನೂ ಓದಿ: ಹೈವೋಲ್ಟೇಜ್​ ಮೆಟ್ರೋ ಹಳಿಗಳ ಮೇಲೆ ಯುವಕನ ಹುಚ್ಚಾಟ: ಮೆಟ್ರೋ ಸ್ಥಗಿತ

ಇನ್ನು, ಈ ಮದುವೆಗ ಬರುವ ಪ್ರತಿಯೊಬ್ಬ ಅತಿಥಿಗೂ ಒಂದು ಬಾರ್ಕೋಡ್ ನೀಡಲಾಗಿತ್ತು. ಅದನ್ನು ಸ್ಕ್ಯಾನ್ ಮಾಡಿದ ನಂತರವೇ ಮದುವೆ ಮಂಟಪಕ್ಕೆ ಪ್ರವೇಶ ಸಾಧ್ಯ. ಮದುವೆ ಸ್ಥಳದಲ್ಲಿ ಭದ್ರತಾ ಸಂಸ್ಥೆಯ ಸಿಬ್ಬಂದಿಯೂ ಹಾಜರಾಗಿದ್ದರು. ಈ ಮದುವೆಗೆ ಎರಡೂ ಕಡೆಯ ಕುಟುಂಬದ ಅತಿಥಿಗಳು ಆಗಮಿಸಲಿದ್ದರು. ಬ್ಯಾಂಕ್ವೆಟ್ ಹಾಲ್‌ನಲ್ಲಿರುವ ಸಿಬ್ಬಂದಿ ಸಂಖ್ಯೆ 20. ಈ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿತ್ತು. ಇದಲ್ಲದೆ, ಈ ಸಭಾಂಗಣ ಬಳಿ ಇರುವ ಪ್ರತಿಯೊಂದು ಅಂಗಡಿಯನ್ನು ಮುಚ್ಚಲಾಗಿತ್ತು.

ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಕಲಾ ಜತೇಡಿ ಮತ್ತು ಅನುರಾಧಾ ಚೌಧರಿ ಅವರ ಪ್ರೇಮಕಥೆ ಮೂರು ವರ್ಷಗಳ ಹಿಂದೆ ಪ್ರಾರಂಭವಾಯಿತು. ಇಬ್ಬರೂ ಅಪರಾಧ ಎಸಗಿ ತಲೆಮರೆಸಿಕೊಂಡಿದ್ದರು. ಈ ವೇಳೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಹರಿದ್ವಾರದಲ್ಲಿ ರಹಸ್ಯವಾಗಿ ಮದುವೆಯಾದರು. ಆದರೆ ಈಗ ಅವರು ತಮ್ಮ ಮನೆಯವರ ಮುಂದೆ ಮದುವೆಯಾಗಲು ನಿರ್ಧರಿಸಿದ್ದಾರೆ. ಅನುರಾಧಾ ಚೌಧರಿ ಈಗಾಗಲೇ ಶಿಕ್ಷಣ ಪಡೆದಿದ್ದಾರೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಸಂದೀಪ್ ಮೇಲಿನ ಪ್ರೀತಿಗೆ ಆಕೆ ಎಲ್ ಎಲ್ ಬಿ ಓದಲು ಆರಂಭಿಸಿದ್ದಾರೆ. ಈಗ ಆಕೆಯೇ ಕಲಾ ಜತೇಡಿ ಪ್ರಕರಣವನ್ನು ನೋಡಿಕೊಳ್ಳುತ್ತಾಳಂತೆ.

RELATED ARTICLES

Related Articles

TRENDING ARTICLES