Monday, May 13, 2024

ಹುಕ್ಕಾ ನಿಷೇಧ ಕ್ರಮ ಒಳ್ಳೆಯದು: ಹೈಕೋರ್ಟ್‌

ಬೆಂಗಳೂರು: ಹುಕ್ಕಾ ಮತ್ತು ಹುಕ್ಕಾ ಬಾರ್‌ ನಿಷೇಧ ಪ್ರಶ್ನಿಸಿರುವ ಅರ್ಜಿ ಸಂಬಂಧ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.

ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ, ಹತ್ತಿಪ್ಪತ್ತು ವರ್ಷಗಳ ಹಿಂದೆ ನಿಯಂತ್ರಣ ಅಥವಾ ನಿಷೇಧ ಎಲ್ಲಿತ್ತು? ಅತಿರೇಕಕ್ಕೆ ಹೋದ ಬಳಿಕ ಎಚ್ಚೆತ್ತಿದ್ದೀರಾ ಎಂದು ಪ್ರಶ್ನಿಸಿ ತಡವಾದರೂ ಕ್ರಮ ವಹಿಸಿದ್ದು ಒಳ್ಳೆಯದು ಎಂದಿತು.

ಇದನ್ನೂ ಓದಿ: Challenging star Darshan: ಪವಿತ್ರಾ ಗೌಡ ಕೈಮೇಲೆ 777 ಟ್ಯಾಟೂ!, ಏನಿದರ ಸೀಕ್ರೆಟ್​?

ಅರ್ಜಿದಾರರ ಪರ ಹಿರಿಯ ವಕೀಲ ಕೆ. ಸುಮನ್‌ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಹಿವಾಟು, ಉತ್ಪಾದನೆ, ಪೂರೈಕೆ ಮತ್ತು ಹಂಚಿಕೆ ಕಾಯಿದೆ 2003 ಕೇಂದ್ರ ಸರ್ಕಾರದ ಕಾನೂನಾಗಿದ್ದು, ಇಲ್ಲಿ ಹುಕ್ಕಾ ನಿಷೇಧಕ್ಕೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಆಹಾರ ಪೂರೈಸದ ನಿರ್ದಿಷ್ಟ ಸ್ಥಳಗಳಲ್ಲಿ ಹುಕ್ಕಾ ಸೇದಲು ಅವಕಾಶವಿದೆ ಎಂದರು.

RELATED ARTICLES

Related Articles

TRENDING ARTICLES