Saturday, May 11, 2024

ಗಾಳಿ ಆಂಜನೇಯ ದೇವಾಲಯ ಆಡಳಿತ ಮಂಡಳಿ ಸದಸ್ಯರಿಂದ ಕಂತೆ ಕಂತೆ ಹುಂಡಿ ಹಣ ಕಳ್ಳತನ!

ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರುವ ಪ್ರಸಿದ್ದ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿದ್ದ ಕಂತೆ ಕಂತೆ ಹಣವನ್ನು ಹಾಡ ಹಗಲೇ ದೇವಾಲಯದ ಆಡಳಿತ ಮಂಡಳಿಯ ಸದಸ್ಯನೊಬ್ಬ ಎಗರಿಸಿರುವ ಘಟನೆ ನಡೆದಿದಿದ್ದು, ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಪತ್ತೆಯಗಿದೆ.

ಇದನ್ನೂ ಓದಿ: ಗೋಬಿ ಮಂಚೂರಿ ಬ್ಯಾನ್​ಗೆ ಹೋಟೆಲ್​ಗಳ ಸಂಘ ವಿರೋಧ!

ಹಣ ಎಗರಿಸಿದವರು ದೇವಾಲಯದ ಆಡಳಿತ ಮಂಡಳಿ ಸದಸ್ಯ ಗೋಪಿ ಎಂದು ತಿಳಿದು ಬಂದಿದೆ. ಮುಜರಾಯಿ ಇಲಾಖೆಗೆ ಸೇರಿರುವ ಗಾಳಿ ಆಂಜನೇಯ ದೇವಾಲಯದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಹನುಂತಪ್ಪ ಸಮ್ಮುಖದಲ್ಲಿ ಹುಡಿ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ವೇಳೆ, ಆಡಳಿತ ಮಂಡಳಿ ಸದಸ್ಯ ಗೋಪಿ ಎನ್ನುವವರು ಹುಂಡಿ ಹಣ ಎಣಿಕೆ ಮಾಡಿ ಇಟ್ಟಿದ್ದಿದ್ದ ಹಣವನ್ನು ಯಾರಿಗೂ ತಿಳಿಯದಂತೆ ಹೊಂಚುಹಾಕಿ ಕಂತೆ ಕಂತೆ ಹಣವನ್ನು ತನ್ನ ಜೇಬಿಗೆ ಇಳಿಸಿಕೊಂಡಿದ್ದಾನೆ, ಈ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ.

ಈ ಕೃತ್ಯಕ್ಕೆ ಮತ್ತೊಬ್ಬ ಸದಸ್ಯ ಮಂಜು ಎಂಬುವವರು ಈ ಕಳ್ಳತನಕ್ಕೆ ಸಹಕರಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಘಟನೆಯೂ ಬ್ಯಾಟರಾಯನಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES