Tuesday, May 21, 2024

ಸಂವಿಧಾನ ಬದಲಾವಣೆ ಮಾಡಿದ್ರೆ ರಕ್ತಪಾತವಾಗುತ್ತೆ : ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು : ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತವಾಗುತ್ತೆ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆಯ ಸಂದೇಶ ರವಾನಿಸಿದರು.

ಅನಂತಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಬಿಜೆಪಿಯವರ ಹಿಡನ್ ಅಜೆಂಡಾ. ಸಂವಿಧಾನ ಬದಲಾವಣೆ ಮಾಡಬೇಕು ಅನ್ನೋದು ಇವರ ಹಿಡನ್ ಅಜೆಂಡಾ ಎಂದು ಕಿಡಿಕಾರಿದರು.

ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಇದೇ ಮೊದಲ ಬಾರಿಯಲ್ಲ. ಹಿಂದೆ ಮಂತ್ರಿಯಾಗಿದ್ದಾಗಲು ಹೇಳಿದ್ರು. ಯಾರ ಕಾಲದಲ್ಲಿ ಅವರು ಹೇಳಿದ್ದು..? ನರೇಂದ್ರ ಮೋದಿ ಪ್ರಧಾನಿಯಾಗಿದ್ದಾಗ ಹೇಳಿದ್ದು. ನರೇಂದ್ರ ಮೋದಿಯವರು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಿಲ್ಲ. ಬಿಜೆಪಿಯ ಹಿರಿಯ ನಾಯಕರು ಅನಂತಕುಮಾರ್ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ‌ ಎಂದು ಗರಂ ಆದರು.

ಇವನು ಈಗ ಸಿಟ್ಟಿಂಗ್ ಎಂಪಿ

ಅನಂತಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಎಂಬ ಬಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಂತ್ರಿ ಮಂಡಲದಲ್ಲಿದ್ದುಕೊಂಡು ಅವರ ವಯಕ್ತಿಕ ಹೇಳಿಕೆ ಆಗುತ್ತಾ..? ಸರ್ಕಾರ ಅಂದ್ರೆ ಅದು ಪಕ್ಷದ ಹೇಳಿಕೆ. ಇವನು ಈಗ ಸಿಟ್ಟಿಂಗ್ ಎಂಪಿ(ಸಂಸದ). ಅವರು ಸ್ಟೇಟ್ಮೆಂಟ್ ಕೊಡ್ತಾರೆ ಅಂದ್ರೆ ಏನು..? ಅವರು ಸಿನೀಯರ್ ಸಂಸದರು. ನಮ್ಗೂ ಅದಕ್ಕೂ ಸಂಬಂಧವಿಲ್ಲ ಅಂದ್ರೆ ಹೇಗೆ..? ಎಂದು ವಾಗ್ದಾಳಿ ನಡೆಸಿದರು.

ಇವ್ರು ಸರ್ವಾಧಿಕಾರಿ ವ್ಯವಸ್ಥೆ ತರ್ತಾರೆ

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರಿಯಲ್ಲಿ ನಂಬಿಕೆ ಇದೆ. ಸರ್ವಾಧಿಕಾರಿ ವ್ಯವಸ್ಥೆ ತರಬೇಕು ಅನ್ನೋದು ಅವರ ಉದ್ದೇಶ. ಸಂವಿಧಾನ ಸಮ ಸಮಾಜವನ್ನ ಬಯಸುತ್ತೆ. ಅವಕಾಶ ವಂಚಿತರಿಗೆ ನ್ಯಾಯ ಒದಗಿಸುತ್ತೆ. ನಮ್ಮ ಸಂವಿಧಾನಲ್ಲಿ ಸಮಾನತೆ, ಸ್ವಾತಂತ್ರ್ಯ, ಬ್ರಾತೃತ್ವ ಇದೆ. ಸಂವಿಧಾನ ಬದಲಾವಣೆ ಮಾಡೋದೇ ಬಿಜೆಪಿಯ ಹಿಡನ್ ಅಜೆಂಡಾ ಎಂದು ಸಿದ್ದರಾಮಯ್ಯ ಹರಿಹಾಯ್ದರು.

RELATED ARTICLES

Related Articles

TRENDING ARTICLES