Sunday, May 19, 2024

ನೀರು ಕೊಡುವ ಯೋಗ್ಯತೆ ಇದ್ರೆ ಅಧಿಕಾರದಲ್ಲಿ ಇರಿ ಇಲ್ಲದಿದ್ರೆ ಕುರ್ಚಿ ಬಿಡಿ: ಆರ್​.ಅಶೋಕ್​

ಬೆಂಗಳೂರು: ಕುಡಿಯುವ ನೀರು ಕೊಡುವ ಯೋಗ್ಯತೆ ಇದ್ರೆ ಅಧಿಕಾರದಲ್ಲಿ ಇರಿ ಇಲ್ಲದಿದ್ರೆ ಕುರ್ಚಿ ಬಿಡಿ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಹೇಳಿದ್ದಾರೆ. 

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬರಪರಿಹಾರ ತರಲು ಯೋಗ್ಯತೆ ಇಲ್ಲ ಅಂದ್ರೆ ಅಧಿಕಾರ ಬಿಡಿ. ಬೇರೆ ಯಾರಾದ್ರು ಕೇಂದ್ರದಿಂದ ಪರಿಹಾರ ತರ್ತಾರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಂದ್ರದ ಕಡೆ ಪರಿಹಾರಕ್ಕಾಗಿ ನೋಡಿಲ್ಲ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿ ಕೇಂದ್ರದ ಕಡೆ ನೋಡ್ತಿದೆ. ಕುಡಿಯುವ ನೀರು ಕೊಡುವ ಯೋಗ್ಯತೆ ಇದ್ರೆ ಅಧಿಕಾರದಲ್ಲಿ ಇರಿ ಇಲ್ಲದಿದ್ರೆ ಕುರ್ಚಿ ಬಿಡಿ ಎಂದು ಡಿಕೆ ಶಿವಕುಮಾರ್​ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪ್ರಕೃತಿ ವಿಕೋಪ ಇದ್ದಾಗ ಪರಿಹಾರ ಹಣಕ್ಕೆ ನೀತಿ ಸಂಹಿತೆ ಅಡ್ಡಿಯಾಗಲ್ಲ ಬಿಜೆಪಿ ಸರ್ಕಾರ ಇದ್ದಾಗ ಡಿಸೆಂಬರ್ ನಲ್ಲಿ ಪರಿಹಾರ ಕೊಟ್ಟಿತ್ತು. ರಾಜ್ಯ ಸರ್ಕಾರ ತಮಿಳುನಾಡಿಗೆ ಪದೇ ಪದೇ ನೀರು ಬಿಡ್ತಿದೆ.ರಾಜ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ ನಾಚಿಕೆಗೆಟ್ಟ ಸರ್ಕಾರ ಇದು. ನಮ್ಮ ಕುಡಿಯುವ ನೀರನ್ನ, ಚುನಾವಣೆ ಹೊಂದಾಣಿಕೆಗೆ ತಮಿಳು ನಾಡಿಗೆ ನೀರು ಬಿಟ್ಟಿದ್ದಾರೆ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದರು.

ಮೇಕೆದಾಟು ಮಾಡ್ತಿವಿ ಅಂತ ಹೇಳಿದ್ರು ಹೋರಾಟ ಮಾಡಿದ್ರು ಈಗ ಕೇಂದ್ರ ಸರ್ಕಾರ ಎನ್ನುತ್ತಾರೆ ಬಜೆಟ್ ನಲ್ಲಿ 10 ಸಾ. ಕೋಟಿ‌ ರೂ.ಇಡಬೇಕಿತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ.ಲೂಟಿ ಹೊಡೆಯೋದ್ರಲ್ಲಿ ಕಾಂಗ್ರೆಸ್ ಬ್ಯುಸಿ ಇದೆ ಎಂದರು

ಮನಮೋಹನ್ ಸಿಂಗ್ ಸರ್ಕಾರ ನಾಲ್ಕಾರು ತಿಂಗಳ ಬಳಿಕ ಕೊಟ್ಟಿದೆ ಈಗ ಕಾಂಗ್ರೆಸ್ ನವರು ಬಾಯಿ ಬಡಿದುಕೊಳ್ತಾರೆ ತನಿಳುನಾಡು, ಆಂದ್ರದವರು ಕೇಂದ್ರದ ಅನುದಾನ ತರ್ತಾರೆ ನಮ್ಮ ರಾಜ್ಯದ ಕಾಂಗ್ರೆಸ್ ಬೇರೆ ನಾ? ರೇವಂತ್ ರೆಡ್ಡಿ ನೋಡಿ ಕಲಿತುಕೊಳ್ಳಲಿ ಹೇಗೆ ಮಾತನಾಡಬೇಕು ಎಮದರು.

ಲೋಕಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ದೆಹಲಿಯಲ್ಲಿ ಇಂದು ಸಭೆ ನಡೆಯಬೇಕಿತ್ತು ಕರಣಾಂತರದಿಂದ ಮುಂದೆ ಹೋಗಿದೆ. 28 ಲೋಕಸಭೆ ಕ್ಷೇತ್ರದ ಬಗ್ಗೆ ಚರ್ಚೆ ಮಾಡಬೇಕಿದೆ.

ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ ಗೋ ಬ್ಯಾಕ್ ಚಳುವಳಿಯ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಲ್ಲ ಯಾರೇ ಅಭ್ಯರ್ಥಿ ಆದರೂ ಒಟ್ಟಿಗೆ ಕೆಲಸ ಮಾಡ್ತಾರೆ. ಕಳೆದ ಬಾರಿ ಕೂಡ ಭಿನ್ನಾಭಿಪ್ರಾಯ ಇತ್ತು ಈಗಲೂ ಇದೆ ಅಭ್ಯರ್ಥಿ ಘೋಷಣೆ ಬಳಿಕ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಾರೆ ಎಂದರು.

RELATED ARTICLES

Related Articles

TRENDING ARTICLES