Friday, May 17, 2024

ಅನ್ನ ಚೆಲ್ಲದಂತೆ ಸಿದ್ಧಗಂಗಾ ಮಠದ ಮಕ್ಕಳ ಪಾಠ: ಮಕ್ಕಳ ಕಾರ್ಯಕ್ಕೆ ಶ್ಲಾಘನೆ!

ತುಮಕೂರು : ಪ್ರಸಿದ್ದ ಸಿದ್ದಗಂಗಾ ಮಠದ ಜಾತ್ರೆ ಹಿನ್ನೆಲೆ ಮಠಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಅನ್ನದ ಬೆಲೆ ತಿಳಿಸಿಕೊಟ್ಟಿರುವ ಮಠದ ಮಕ್ಕಳ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ತ್ರಿವಿಧ ದಾಸೋಹಕ್ಕೆ ತುಮಕೂರಿನ ಸಿದ್ಧಗಂಗಾ ಮಠ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ಯಾವುದೇ ಭಕ್ತರು, ಪ್ರವಾಸಿಗರು ಪ್ರಸಾದ ಸ್ವೀಕರಿಸದೇ ಹೋಗುವುದಿಲ್ಲ. ಸಿದ್ಧಗಂಗಾ ಜಾತ್ರೆಯಲ್ಲೂ ಲಕ್ಷಾಂತರ ಜನರಿಗೆ ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಈ ವೇಳೆ ತಟ್ಟೆಯಲ್ಲಿ ಅನ್ನ ಹಾಕಿಸಿಕೊಂಡು, ಸಂಪೂರ್ಣವಾಗಿ ಊಟ ಮಾಡಲಾಗದೇ ಬಿಟ್ಟವರಿಗೆ ವಿದ್ಯಾರ್ಥಿಗಳು ಪುಲ್ ಕ್ಲಾಸ್ ತೆಗೆದುಕೊಂಡಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಡಿಎಂಕೆ ಗೆ ಬೆಂಬಲ ಸೂಚಿಸಿದ ನಟ ಕಮಲ್ ಹಾಸನ್​!

ಮಠದ ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ. ಅನ್ನದ ಮಹತ್ವ ತಿಳಿಸುತ್ತಿರುವ ಮಕ್ಕಳು, ತಟ್ಟೆಯಲ್ಲಿ ಹಾಕಿಸಿಕೊಂಡ ಯಾವುದೇ ಅನ್ನ ಪ್ರಸಾದ ಬಿಡದಂತೆ ಪಾಠ ಮಾಡಿದ್ಧಾರೆ. ತಟ್ಟೆಯನ್ನು ಚೆಲ್ಲುವ ಮುನ್ನ ಸಂಪೂರ್ಣ ಊಟ ಮಾಡುವಂತೆ, ಇಲ್ಲದೇ ಹೋದರೆ ಬಾಕ್ಸ್​ನಲ್ಲಿ ಹಾಕಿಕೊಂಡು ಹೋಗುವಂತೆ ತಿಳಿಸಿದ್ದಾರೆ. ಅನ್ನದ ಮಹತ್ವ ತಿಳಿಸುತ್ತಿದ್ದ ವಿದ್ಯಾರ್ಥಿಗಳಿಗೆ ಶಹಬಾಸ್ ಎಂದ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES