Sunday, May 19, 2024

5 ಪಂದ್ಯ.. ಯಶಸ್ವಿ 6 ದಾಖಲೆ.. ‘ರೆಕಾರ್ಡ್ ಕಿಂಗ್’ ಆರ್ಭಟಕ್ಕೆ ದಿಗ್ಗಜರ ದಾಖಲೆಗಳು ಉಡೀಸ್

ಬೆಂಗಳೂರು : ಆಡಿದ್ದು 5 ಟೆಸ್ಟ್​ ಪಂದ್ಯ.. ತನ್ನ ಹೆಸರಿಗೆ ಬರೆದುಕೊಂಡಿದ್ದು ಹತ್ತಾರು ದಾಖಲೆ.. ‘ರೆಕಾರ್ಡ್​ ಕಿಂಗ್’ ಆರ್ಭಟಕ್ಕೆ ಕ್ರಿಕೆಟ್​ ದಿಗ್ಗಜರ ದಾಖಲೆಗಳು ಧೂಳಿಪಟ.

ಹೌದು, ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬ್ಯಾಟ್​ ಅಕ್ಷರಶಃ ಖಡ್ಗದಂತೆ ಜಳಪಿಸಿತು. ಜೈಸ್ವಾಲ್ ತನ್ನ ಬೊಂಬಾಟ್​ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದರು.

ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ. ಎರಡನೇ ಟೆಸ್ಟ್‌ನಲ್ಲಿ ದ್ವಿಶತಕ. ಮೂರನೇ ಟೆಸ್ಟ್‌ನಲ್ಲಿ ದ್ವಿಶತಕ(ಸತತ ಎರಡು ದ್ವಿಶತಕ). ನಾಲ್ಕನೇ ಟೆಸ್ಟ್‌ನಲ್ಲಿ ಅರ್ಧಶತಕ ಹಾಗೂ ಐದನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್​ (712) ಗಳಿಸಿದ ಭಾರತೀಯ ಬ್ಯಾಟರ್ ಎಂಬ ಮೈಲಿಗಲ್ಲನ್ನು ಸಾಧಿಸಿದರು.

ಟೆಸ್ಟ್ ಕ್ರಿಕೆಟ್​ನಲ್ಲಿ (ಇನ್ನಿಂಗ್ಸ್​ಗಳು) ವೇಗವಾಗಿ 1,000 ರನ್‌ ಗಳಿಸಿದ ಭಾರತದ ಬ್ಯಾಟರ್ ಪೈಕಿ ಎರಡನೇ ಸ್ಥಾನ, 1,000 ರನ್‌ ಪೂರೈಸಿದ 4ನೇ ಅತ್ಯಂತ ಕಿರಿಯ ಭಾರತೀಯ ಎಂಬ ಶ್ರೇಯಕ್ಕೂ ಯಶಸ್ವಿ ಜೈಸ್ವಾಲ್ ಪಾತ್ರರಾದರು. ಅಲ್ಲದೇ, ತಮ್ಮ ಅಮೋಘ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಯಶಸ್ವಿ ಜೈಸ್ವಾಲ್ ದಾಖಲೆಗಳು

  • ಅತಿ ಹೆಚ್ಚು ರನ್‌ ಗಳಿಕೆ : ಯಶಸ್ವಿ ಜೈಸ್ವಾಲ್
  • ಗರಿಷ್ಠ ಸ್ಕೋರ್ : ಯಶಸ್ವಿ ಜೈಸ್ವಾಲ್
  • ಗರಿಷ್ಠ ಸರಾಸರಿ : ಯಶಸ್ವಿ ಜೈಸ್ವಾಲ್
  • ಹೆಚ್ಚು ಶತಕಗಳು : ಯಶಸ್ವಿ ಜೈಸ್ವಾಲ್ (ಜಂಟಿಯಾಗಿ)
  • ಹೆಚ್ಚು ಬೌಂಡರಿಗಳು : ಯಶಸ್ವಿ ಜೈಸ್ವಾಲ್
  • ಅತಿ ಹೆಚ್ಚು ಸಿಕ್ಸರ್‌ಗಳು : ಯಶಸ್ವಿ ಜೈಸ್ವಾಲ್

ಹೀಗಿತ್ತು ಆಂಗ್ಲರ ವಿರುದ್ಧ ಜೈಸ್ವಾಲ್ ಆರ್ಭಟ

  • ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ : 80(74)
  • ಎರಡನೇ ಇನ್ನಿಂಗ್ಸ್​ : 15(35)
  • 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ : 209(290)
  • ಎರಡನೇ ಇನ್ನಿಂಗ್ಸ್​ : 17(27)
  • 3ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ : 10(10)
  • ಎರಡನೇ ಇನ್ನಿಂಗ್ಸ್​ : 214*(236)
  • 4ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ : 73(117)
  • ಎರಡನೇ ಇನ್ನಿಂಗ್ಸ್​ : 37(44)
  • 5ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ : 57(58)

ಟೆಸ್ಟ್ ಸರಣಿಯಲ್ಲಿ 100 ಸಿಕ್ಸ್‌ಗಳು

  • ಭಾರತ ಹಾಗೂ ಇಂಗ್ಲೆಂಡ್ (2024) ಟೆಸ್ಟ್ ಸರಣಿಯಲ್ಲಿ 100 ಸಿಕ್ಸ್‌ಗಳು ದಾಖಲಾದವು.
  • ಭಾರತದ ಬ್ಯಾಟರ್​ಗಳು 72 ಸಿಕ್ಸರ್‌ಗಳನ್ನು ಬಾರಿಸಿದರು.
  • ಇಂಗ್ಲೆಂಡ್‌ ಬ್ಯಾಟರ್​ಗಳು 28 ಸಿಕ್ಸರ್‌ಗಳನ್ನು ಹೊಡೆದರು.
  • ಭಾರತದ ಯಶಸ್ವಿ ಜೈಸ್ವಾಲ್ 26 ಸಿಕ್ಸರ್‌ಗಳೊಂದಿಗೆ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರು.

RELATED ARTICLES

Related Articles

TRENDING ARTICLES