Saturday, June 15, 2024

‘ಕೈ’ ಮೊದಲ ಪಟ್ಟಿ ರಿಲೀಸ್.. ರಾಹುಲ್ ಗಾಂಧಿ ಸೇರಿ ಪ್ರಮುಖ ನಾಯಕರು ಎಲ್ಲಿಂದ ಸ್ಪರ್ಧೆ ಗೊತ್ತಾ?

ನವದೆಹಲಿ : ಲೋಕಸಭಾ ಚುನಾವಣೆ-2024ಗೆ ಎಐಸಿಸಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ.

ಮೊದಲ ಪಟ್ಟಿಯಲ್ಲಿಯೇ 39 ಅಭ್ಯರ್ಥಿಗಳನ್ನು ಘೋಷಿಸಿದೆ. ಅಭ್ಯರ್ಥಿಗಳ ಪೈಕಿ 15 ಮಂದಿ ಸಾಮಾನ್ಯ ವರ್ಗದವರು ಹಾಗೂ ಉಳಿದ 24 ಮಂದಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದವರಿಗೆ ಮಣೆ ಹಾಕಿದೆ.

ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್​ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ​ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಲಾಗಿದೆ.

ವಯನಾಡ್​ನಿಂದ ರಾಗಾ ಸ್ಪರ್ಧೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿಯೂ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಪ್ರಸ್ತುತ ವಯನಾಡು ಹಾಲಿ ಸಂಸದರಾಗಿದ್ದಾರೆ.

ಮೊದಲ ಪಟ್ಟಿಯಲ್ಲಿರುವ ‘ಕೈ’ ಪ್ರಮುಖರು

  • ವಯನಾಡ್ : ರಾಹುಲ್ ಗಾಂಧಿ
  • ತಿರುವನಂತಪುರಂ : ಶಶಿ ತರೂರ್
  • ಕಾಸರಗೋಡು : ರಾಜಮೋಹನ್ ಉಣ್ಣಿತ್ತಾನ್
  • ಕಣ್ಣೂರು : ಕೆ. ಸುಧಾಕರನ್
  • ವಡಕರ : ಶಫಿ ಪರಂಬಿಲ್
  • ಕೋಝಿಕ್ಕೋಡ್ : ಎಂ.ಕೆ. ರಾಘವನ್
  • ಪಾಲಕ್ಕಾಡ್ : ವಿ.ಕೆ. ಶ್ರೀಕಂಠನ್
  • ಅಲತೂರ್ : ರೆಮ್ಯಾ ಹರಿದಾಸ್
  • ತ್ರಿಶೂರ್ : ಕೆ. ಮರಳೀಧರನ್
  • ಚಾಲಕ್ಕುಡಿ : ಬೆನ್ನಿ ಬಹನ್ನಾನ್
  • ಎರ್ನಾಕುಲಂ : ಹಿಬಿ ಇಡೆನ್
  • ಇಡುಕ್ಕಿ : ಡೀನ್ ಕುರಿಯಾಕೋಸ್
  • ಮಾವೇಲಿಕರ : ಕೋಡಿಕುನ್ನಿಲ್ ಸುರೇಶ್
  • ಪಟ್ಟಣಂತಿಟ್ಟ : ಆ್ಯಂಟೋ ಆ್ಯಂಟೋನಿ
  • ಅತ್ತಿಂಗಲ್ : ಅಡೂರ್ ಪ್ರಕಾಶ್
  • ಶಿವಮೊಗ್ಗ : ಗೀತಾ ಶಿವರಾಜ್​ ಕುಮಾರ್
  • ತುಮಕೂರು : ಎಸ್​.ಪಿ. ಮುದ್ದಹನುಮೇಗೌಡ
  • ಮಂಡ್ಯ : ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
  • ಹಾಸನ : ಶ್ರೇಯಸ್ ಪಟೇಲ್
  • ಬೆಂಗಳೂರು ಗ್ರಾಮಾಂತರ : ಡಿ.ಕೆ. ಸುರೇಶ್
  • ವಿಜಯಪುರ : ಎಚ್.​ಆರ್.​ ಅಲ್ಗೂರ್​
  • ಹಾವೇರಿ : ಆನಂದ್ ಸ್ವಾಮಿ ಗಡ್ಡ ದೇವರಮಠ

RELATED ARTICLES

Related Articles

TRENDING ARTICLES