Monday, May 20, 2024

ಬಾಂಬ್ ಸ್ಫೋಟಕ್ಕೂ ಪಾಕಿಸ್ತಾನಕ್ಕೂ ಲಿಂಕ್ ಇದೆ : ಶಾಸಕ ಯತ್ನಾಳ್

ವಿಜಯಪುರ : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾಕಿಸ್ತಾನವನ್ನು ಲಿಂಕ್ ಮಾಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಫೋಟ ಒಂದು ವ್ಯವಸ್ಥಿತ ಜಾಲ. ಬಾಂಬ್ ಸ್ಫೋಟಕ್ಕೂ ಪಾಕಿಸ್ತಾನ ಹಾಗೂ ಐಎಸ್‌ಐಎಸ್​ಗೂ ಲಿಂಕ್ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದೇಶವನ್ನ ಅಭದ್ರಗೊಳಿಸುವ ಸಂಚು ನಡೆಯುತ್ತಿದೆ. ಪಿಎಫ್‌ಐ ಚಟುವಟಿಕೆಗಳಿಗೂ ಲಿಂಕ್ ಇದೆ. ಸ್ಫೋಟದ ಹಿಂದೆ ಭಾರತವನ್ನು ಇಸ್ಲಾಮೀಕರಣ ಮಾಡುವ ಸಂಚು ಇದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣದಿಂದ ಬಾಂಬರ್​ಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಕುಟುಕಿದ್ದಾರೆ.

ನಾಸೀರ್ ಕೊರಳಿಗೆ ಸುತ್ತಿಕೊಳ್ಳುತ್ತದೆ

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣವು ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಕೊರಳಿಗೆ ಸುತ್ತಿಕೊಳ್ಳುತ್ತೆ. ನಾಸೀರ್ ಹುಸೇನ್​ರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಅವನಿಗೂ ಸಿಎಂ-ಡಿಕೆಶಿಗೂ ಟಚ್​ ಇದೆ

ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ಜೊತೆಗೆ ನಿಕಟ ಸಂಬಂಧ (ಸಂಪರ್ಕ) ಹೊಂದಿದ್ದಾನೆ. ಇದರಲ್ಲಿ ನಾಸೀರ್ ಹುಸೇನ್‌ ಪಾತ್ರ ಖಂಡಿತ ಇದ್ದೇ ಇದೆ‌. ಬಾಂಬ್ ಸ್ಫೋಟ ಪ್ರಕರಣ ತನಿಖೆ ಮುಗಿಯುವವರೆಗೂ ನಾಸೀರ್ ಹುಸೇನ್‌ರಿಗೆ ಪ್ರಮಾಣ ವಚನ ಬೋಧಿಸದಂತೆ ಉಪರಾಷ್ಟ್ರಪತಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಶಾಸಕ ಯತ್ನಾಳ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES