Monday, May 20, 2024

ಕುರಾನ್ ಪಠಣಕ್ಕೆ ಅವಕಾಶ ನೀಡದಂತೆ ಒತ್ತಾಯ!

ಹಾಸನ: ಏಪ್ರಿಲ್​ 20 ರಂದು ಐತಿಹಾಸಿಕ ಬೇಲೂರಿನ ಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವ ನಡೆಯಲಿದೆ.
ರಥೋತ್ಸವದಂದು ಮುಸ್ಲಿಂ ಖಾಜೊ ಸಾಹೇಬರಿಂದ ಕುರಾನ್ ಪಠಾಣಕ್ಕೆ ಅವಕಾಶ ನೀಡದಂತೆ ಒತ್ತಾಯಿಸಲಾಗಿದೆ.

ಬೇಲೂರು ಚನ್ನಕೇಶವ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದ್ದಾರೆ. ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ, ಹೋಮ, ಹವನ ನಡೆಸಬೇಕು. ಶ್ರೀ ಚನ್ನಕೇಶವ ದೇವಸ್ಥಾನ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆ ಅಡಿಯಲ್ಲಿ ಬರುತ್ತದೆ. ರಥೋತ್ಸವದ ದಿನದಂದು ಮೇದೂರು ಖಾಜಿ ಸಾಹೇಬರ ಕುಟುಂಬದವರಿಗೆ ಮರ್ಯಾದೆ ಮತ್ತು ಧಾನ್ಯ ಕಾಣಿಕೆ ನೀಡಬೇಕು ಎಂದು ಉಲ್ಲೇಖ ಇದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಎರಡು ಜಿಲ್ಲೆಗಳು ಒಗ್ಗಟ್ಟಾಗಿ ಕೆಲಸ ಮಾಡೋಣ: ಪಿ.ಎನ್ ರವೀಂದ್ರ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಯಾವುದೇ ಅನ್ಯ ಧರ್ಮೀಯರ ಆಚರಣೆ, ಚಟುವಟಿಕೆ ಹಾಗೂ ಪಠಣ ಮಾಡಲು ಅವಕಾಶವಿಲ್ಲ ಆದ್ದರಿಂದ ಕುರಾನ್ ಪಠಣ ಮಾಡಲು ಅವಕಾಶ ನೀಡದಂತೆ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES