Sunday, May 19, 2024

ಸನಾತನ ಧರ್ಮದ ಕುರಿತು ಹೇಳಿಕೆ : ಉದಯನಿಧಿ ಸ್ಟಾಲಿನ್​ಗೆ ಬಿಗ್ ರಿಲೀಫ್​

ಚೆನ್ನೈ : ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಟೀಕೆಗೆ ಗುರಿಯಾಗಿರುವ ತಮಿಳುನಾಡು ಸಚಿವ, ನಟ ಉದಯನಿಧಿ ಸ್ಟಾಲಿನ್‌ ಅವರ ಶಾಸಕ ಸ್ಥಾನದ ಅರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ಮೂಲಕ ತಮಿಳುನಾಡು ಹೈಕೋರ್ಟ್​ ಉದಯನಿಧಿ ಸ್ಟಾಲಿನ್​ಗೆ ಬಿಗ್​ ರಿಲೀಫ್​ ನೀಡಿದೆ.

ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸುವ ಜತೆಗೆ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್‌ ಹೇಳಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಅವರು ನೀಡಿದ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುವ ಜತೆಗೆ ಬೆಂಗಳೂರು, ಪಟನಾ, ಉತ್ತರ ಪ್ರದೇಶ ಸೇರಿ ಹಲವೆಡೆ ಎಫ್‌ಐಆರ್‌ಗಳು ದಾಖಲಾಗಿವೆ. ಇದರಿಂದ ತಮಿಳುನಾಡು ಸಚಿವನಿಗೆ ತೊಂದರೆಯಾಗುತ್ತಿದ್ದು, ಎಲ್ಲ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ, ವಾದ-ಪ್ರತಿವಾದ ಆಲಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದರು.

ಇದನ್ನೂ ಓದಿ: ಧರ್ಮದ ಹೆಸರಲ್ಲಿ ನಿಮ್ಮನ್ನು ಕೆರಳಿಸಿ ವಂಚಿಸುವವರು ಬೇಕಾ? ನಾವು ಬೇಕಾ? ಹೃದಯ ಮುಟ್ಟಿ ಕೇಳಿಕೊಳ್ಳಿ

ಈ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯವು “ಉದಯನಿಧಿ ಸ್ಟಾಲಿನ್‌ ಹೇಳಿದ್ದು ತಪ್ಪು. ಆದರೆ, ಅವರನ್ನು ಅನರ್ಹಗೊಳಿಸಲು ಅಥವಾ ಯಾವುದೇ ಕ್ರಮ ತೆಗೆದುಕೊಳ್ಳಲು, ಅವರಿಗೆ ಯಾವ ನ್ಯಾಯಾಲಯವೂ ಶಿಕ್ಷೆ ನೀಡಿಲ್ಲ” ಎಂದು ಮದ್ರಾಸ್‌ ಹೈಕೋರ್ಟ್‌ ತಿಳಿಸಿದೆ.

ಉದಯನಿಧಿ ಸ್ಟಾಲಿನ್‌ ಜತೆಗೆ ಅವರ ಹೇಳಿಕೆಯನ್ನು ಸಮರ್ಥಿಸಿದ ರಾಜ್ಯ ಸಚಿವ ಪಿ.ಕೆ.ಶೇಖರ್‌ ಬಾಬು ಹಾಗೂ ಡಿಎಂಕೆ ಸಂಸದ ಎ. ರಾಜಾ ಅವರನ್ನು ಕೂಡ ಅನರ್ಹಗೊಳಿಸಬೇಕು ಎಂಬುದಾಗಿ ಅರ್ಜಿ ಸಲ್ಲಿಸಲಾಗಿತ್ತು. ಉದಯನಿಧಿ ಸ್ಟಾಲಿನ್‌ ವಿರುದ್ಧ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದೆ.

RELATED ARTICLES

Related Articles

TRENDING ARTICLES