Friday, May 17, 2024

ನಮ್ಮ ಅನ್ನ ತಿಂದು ನಮಕ್ ಹರಾಮಿಗಳು ಪಾಕಿಸ್ತಾನ ಜಿಂದಾಬಾದ್ ಅನ್ನತ್ತಾರೆ: ಯತ್ನಾಳ್

ವಿಜಯಪುರ: ನಮ್ಮ ಅನ್ನ ತಿಂದು ನಮಕ್ ಹರಾಮಿಗಳು ಪಾಕಿಸ್ತಾನ ಜಿಂದಾಬಾದ್ ಅನ್ನತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದಾರೆ. 

ಶಿವಾಜಿ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು,ನಮ್ಮ‌ದೇಶದ ಅನ್ನ ತಿಂದು ಗಾಳಿ ಸೇವೆನೆ ಮಾಡಿ, ನಮಕ್ ಹರಾಮಿಗಳು ನಮ್ಮ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಅನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿದ್ದರು.

ನಿಜಾಮರ ತಂದೆ ರಾಜಾಸಿಂಗ್, ಆದಿಲ್ ಶಾಹಿಯವರ ತಂದೆ ನಾನು. ಛತ್ರಪತಿ ಶಿವಾಜಿ, ರಾಜಾಮಾತಾ ಅಹಿಲ್ಯಾ ಬಾಯಿ ಹೊಳ್ಕರ್, ಅಂಬೇಡ್ಕರ್ ಅವರು ಹುಟ್ಟದೇ ಇದ್ದರೆ ಭಾರತ ಭಾರತವಾಗಿರುತ್ತಿರಲಿಲ್ಲ.ನಮ್ಮ‌ ವಿಧಾನ ಸಭಾ ಅಧ್ಯಕ್ಷ ಮುಸ್ಲಿಂ ಇದ್ದಾರೆ ಆದರೆ ದೇಶ ಭಕ್ತರಿದ್ದಾರೆ. ಹಿಂದೂ ಸ್ಥಾನದ ಅನ್ನ ತಿಂದು ಪಾಕಿಸ್ತಾನದ ಜೈ ಅನ್ನುವರಿಗೆ ಮಿಲತಾ ಕ್ಯಾ ಎಂದ ಯತ್ನಾಳ್​ ಗುಡುಗಿದ್ದರು.

ನಾನು ವಿಜಯಪುರದಲ್ಲಿ ಗೆದ್ದು ಬಂದಿದ್ದೇ ಹಿಂದುಗಳ ಮತದಿಂದಲೇ.ಕರ್ನಾಟಕದಲ್ಲಿ ನಮ್ಮ‌ಪಕ್ಷದಲ್ಲೇ ಮೂರ್ನಾಲ್ಕು ಜನ ಹರಾಮಿಗಳು ಇದ್ದಾರೆ.ನನಗೆ ಸೋಲಿಸಲು ಹರಾಮಿಗಳ ಹಣ ಕಳಿಸಿದ್ದರು.ನಮ್ಮ‌ಪಕ್ಷದಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿತ್ತು.ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ರಾತ್ರೀ ಜಮೀರ ಗೆ ಹಣ ಕೊಟ್ಟು ಬೆಳಿಗ್ಗೆ ಭಾರತ ಮಾತಾ ಕಿ ಜೈ ಅನ್ನುತ್ತಿದ್ದರು.ಹೀಗಾಗಿ ನಮ್ಮ‌ ಪಕ್ಷ ಆಡಳಿತಕ್ಕೆ ಬರಲಿಲ್ಲ. ನನ್ನ‌ ಕೈಯಲ್ಲಿ ಗೃಹ ಖಾತೆ ಕೊಟ್ಟು ನೋಡ್ರೀ ಮನೆ ಹೊಕ್ಕು ಎನ್ ಕೌಂಟರ್ ಮಾಡಿಸುತ್ತಿದ್ದೆ ಎಂದರು.

ಮುಸ್ಲಿಮರ ಜಗದ್ಗುರು ಸಿದ್ದರಾಮಯ್ಯನವರು ಇದ್ದಂಗೆ

ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಹಿಡಿದುಕೊಂಡು ಬಂದಿದ್ದಾರೆ.ನಮ್ಮ‌ ಪೋಲಿಸರಿಗೆ ಫ್ರೀ ಬಿಟ್ಟು ನೋಡ್ರಿ. ಏನು ಕಥೆ ಅಂತಾ ಗೊತ್ತಾಗುತ್ತದೆ.

ಶಿವಾಜಿ‌ ಮಹಾರಾಜರ ಎರಡನೇ ಅವತಾರೆ ನರೇಂದ್ರ ಮೋದಿ

ಐದು ವರ್ಷ ನಮ್ಮ ಕೈಯಲ್ಲಿ ದೇಶ ಕೊಟ್ಟು ನೋಡಿ. ಐದು ವರ್ಷದಲ್ಲಿ ಹಿಂದೂ ರಾಷ್ಟ್ರ ನಾವು ಮಾಡೇ ತೀರುತ್ತೇವೆ.ವಾಪಸ್ ನಮ್ಮ ಧರ್ಮಕ್ಕೆ ಬನ್ನಿ ಇರದಿದ್ದರೆ ಪಾಕಿಸ್ತಾನಕ್ಕೆ ಹೋಗಿ.ಯೋಗಿ ಆದಿತ್ಯ ನಾಥ್ ಮಾಡಿದ್ದಾರೆ ಹಾಗೆ ಬುಲ್ಡೋಜರ್ ಹಾಕುತ್ತೇವೆ. ಮೋದಿ ನಂತರ ಬರುವವರು ಬಾಳ ಡೇಂಜರ್ ಆದಾರ. ಮೋದಿ ನಂತರ ಯೋಗಿ ಬಂದಾಗ, ಕರ್ನಾಟಕದಲ್ಲಿ ನಾನು ಬಂದಾಗ ಎಲ್ಲ ಮುಗಿಸುತ್ತೇವೆ ಎಂದರು.

ನಾನು ವಿಜಯಪುರ ಬಿಟ್ಟು ಎಲ್ಲಿ ಹೋಗಲ್ಲ

ನನಗೆ ಬೆಳಗಾವಿಗೆ ಬಾ, ಬಾಗಲಕೋಟೆಗೆ ಬಾ ಲೋಕಸಭಾ ಚುನಾವಣೆಗೆ ನಿಲ್ಲು ಅನ್ನುತ್ತಿದ್ದಾರೆ.ಎರಡು ದಿನದಿಂದ ನನಗೆ ಬಾಳ ತಲೆ ಕೆಟ್ಟು ಹೋಗಿದೆ.ನಾನು ವಿಜಯಪುರ ಬಿಟ್ಟು ಎಲ್ಲಿ ಹೋಗಲ್ಲ.ನನ್ನ‌ ರಾಜಕೀಯ ಜೀವನ ಇನ್ನೂ 15 ವರ್ಷ ಮಾಡಿ ರಿಟೈಡ್ ಮೆಂಟ್ ಇಲ್ಲೇ ತಗೋತಿನಿ. ಇನ್ನೂ‌ ವಿಜಯಪುರ ದಲ್ಲಿ ಮುಂಬರುವ ದಿನದಲ್ಲಿ ಯಾರೇ ಬರಲಿ‌ ಇಲ್ಲಿ ಗೆಲ್ಲುವದು ಭಗವಾ ಧ್ವಜವೇ. ಬಸನಗೌಡನಾದರು ಬರಲಿ ಯಾರಾದರೂ ಬರಲಿ‌ ವಿಜಯಪುರ ದಲಿ ಗೆಲ್ಲುವುದು ಭಗವಾ ದ್ವಜವೇ ಎಂದ ಶಾಸಕ ಯತ್ನಾಳ ಹೇಳಿದ್ದರು.

RELATED ARTICLES

Related Articles

TRENDING ARTICLES