Wednesday, May 1, 2024

45 ನಿಮಿಷ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಂ ಸರ್ವರ್ ಡೌನ್

ಬೆಂಗಳೂರು : ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತಾಂತ್ರಿಕ ದೋಷದಿಂದ 45 ನಿಮಿಷಗಳ ಕಾಲ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಕಾರ್ಯ ನಿರ್ವಹಿಸುತ್ತಿಲ್ಲ.

ಫೇಸ್​ಬುಕ್​ ಆ್ಯಪ್​ನಲ್ಲಿ ದಿಢೀರ್​​ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಏಕಾಏಕಿ ಎಲ್ಲರ ಫೇಸ್​ಬುಕ್​ ಖಾತೆಗಳು ​ಲಾಗ್​ಔಟ್ ಆಗಿದ್ದವು. ಮತ್ತೆ ಲಾಗಿನ್ ಮಾಡಲು ಆಗದೇ ತಾಂತ್ರಿಕ ಸಮಸ್ಯೆ ಈ ಕುರಿತು ಮೆಟಾ ಕಂಪನಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಬಳಕೆದಾರರು ಎಕ್ಸ್​ನಲ್ಲಿ ದೂರು ಸಲ್ಲಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸರ್ವರ್‌ ಡೌನ್‌ ಆಗಿದೆ. ರೀಲ್ಸ್‌, ಸ್ಟೋರಿಗಳನ್ನು ನೋಡಲು ಆಗದೇ ಜನರು ಪರದಾಡುತ್ತಿದ್ದಾರೆ. ಕೆಲವರು ಇಂಟರ್‌ನೆಟ್‌ ಸಮಸ್ಯೆ ಎಂದುಕೊಂಡು ನೆಟ್‌ ಆಫ್‌ ಅಂಡ್‌ ಆನ್‌ ಮಾಡುತ್ತಿದ್ದಾರೆ.

ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇನ್‌ಸ್ಟಾಗ್ರಾಂ ರಿಪ್ರೆಶ್‌ ಆಗುತ್ತಿಲ್ಲ, ಫೇಸ್‌ಬುಕ್‌ ಪೋಸ್ಟ್‌ಗಳು ಲೋಡ್‌ ಆಗದೇ ಸ್ಟಕ್‌ ಆಗಿವೆ. ಈ ಎರಡೂ ಫ್ಲ್ಯಾಟ್‌ಫಾರಂನಲ್ಲಿ ಬಳಕೆದಾರರು ಲಾಗಿನ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಪಾಸ್‌ವರ್ಡ್‌ ಬದಲಿಸುವ ಬಗ್ಗೆ ಕೇಳುತ್ತಿದ್ದಾರೆ. ಕೆಲ ಸಮಯದ ನಂತರ ಫೇಸ್​ಬುಕ್​ ಸರ್ವರ್​ ಯಥಾಸ್ಥಿತಿಗೆ ಮರಳಿದೆ.

RELATED ARTICLES

Related Articles

TRENDING ARTICLES