ಬೆಂಗಳೂರು : ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ತಾಂತ್ರಿಕ ದೋಷದಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಮೆಟಾ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.
ಸರ್ವರ್ ಡೌನ್ ಹಾಗೂ ತಾಂತ್ರಿಕ ಸಮಸ್ಯೆಯಿಂದ ಸಾಮಾಜಿಕ ಜಾಲತಾಣ ಬಳಕೆದಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ ಎಂದು ಮೆಟಾ ಸಂಸ್ಥೆಯ ವಕ್ತಾರ ಆಂಟಿ ಸ್ಟೋನ್ ಟ್ವೀಟ್ ಮಾಡಿದ್ದಾರೆ.
ಇನ್ನು ಭಾರತದ ಹಲವೆಡೆ ಈಗಾಗಲೇ ಇನ್‌ಸ್ಟಾಗ್ರಾಂ ಕಾರ್ಯ ನಿರ್ವಹಿಸುತ್ತಿದ್ದು, ರೀಲ್ಸ್ ವೀಕ್ಷಿಸುತ್ತಿರುವ ಬಳಕೆದಾರರು ಖುಷಿ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸರ್ವರ್ ಡೌನ್ ಆಗುತ್ತಿದ್ದಂತೆಯೇ ಬಳಕೆದಾರರು ಭಯಭೀತರಾಗಿದ್ದರು. ರೀಲ್ಸ್, ಸ್ಟೋರಿಗಳನ್ನು ನೋಡಲು ಆಗುತ್ತಿಲ್ಲ ಎಂ ದು ಅವಲೊತ್ತುಕೊಂಡಿದ್ದರು. ಈ ಬಗ್ಗೆ ಬಳಕೆದಾರರು ಎಕ್ಸ್ನಲ್ಲಿ ದೂರು ಸಲ್ಲಿಸಿದ್ದರು.