Monday, May 20, 2024

ಕೇವಲ ಮೂರು ಜನರಲ್ಲ, ಇನ್ನು 12 ಜನ ಇದ್ದಾರೆ : ಆರ್. ಅಶೋಕ್

ಕಲಬುರಗಿ : ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರ ಬಂಧನ ವಿಚಾರ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರೆಲ್ಲಾ ಭಯೋತ್ಪಾದಕರು. ಕೇವಲ ಮೂರು ಜನರಲ್ಲ, ಇನ್ನು 10 ರಿಂದ 12 ಜನ ಇದ್ದಾರೆ ಎಂದು ಆರೋಪಿಸಿದ್ದಾರೆ.

ಯಾರು ಕೂಗೇ ಇಲ್ಲ ಎನ್ನುತ್ತಿದ್ದವರು ಇವಾಗ ಏನು ಹೇಳ್ತಾರೆ? ಆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಕೂಡಲೇ ರಾಜೀನಾಮೆ ಕೊಡಬೇಕು. ಶಕ್ತಿಸೌಧದಲ್ಲಿ ಈ ರೀತಿ ಹಿಂದೆ ಎಂದು ಆಗಿರಲಿಲ್ಲ. ಕಾಂಗ್ರೆಸ್‌ನವರು ವಿಧಾನಸೌಧದಲ್ಲಿ ಕುಳಿತುಕೊಳ್ಳೋಕ್ಕೆ ಯೋಗ್ಯರಲ್ಲ. ಕೂಡಲೇ ಸರ್ಕಾರವನ್ನ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

25 ಬೆಂಬಲಿಗರನ್ನು ಕರೆದುಕೊಂಡು ಹೋಗಿದ್ರು

ನಾವು ಈಗಾಗಲೇ ರಾಜ್ಯಪಾಲರ ಕದ ತಟ್ಟಿದ್ದೇವೆ. ಇದನ್ನು ಇಲ್ಲಿಗೆ ಬಿಡೋದಿಲ್ಲ. ನಾಸೀರ್ ಹುಸೇನ್ ತಮ್ಮ 25 ಬೆಂಬಲಿಗರನ್ನು ಕರೆದುಕೊಂಡು ಹೋಗಿದ್ರು. ಇದರಲ್ಲೇ ಗೊತ್ತಾಗುತ್ತೆ ಅಲ್ಪಾಸಂಖ್ಯಾತರ ಓಲೈಕೆ ಎಷ್ಟಿದೆ ಅಂತ. ಖಾಸಗಿ ಎಫ್​ಎಸ್​ಎಲ್ ವರದಿ ಸುಳ್ಳು ಅಂದ್ರೆ, ಇವಾಗ್ಯಾಕೆ ಮೂವರನ್ನು ಅರೆಸ್ಟ್ ಮಾಡಿದ್ರು? ಪ್ರಿಯಾಂಕ್ ಖರ್ಗೆವರಿಗೆ ತಾಕತ್ತು, ಧಮ್ ಇದ್ರೆ ಖಾಸಗಿ ರಿಪೋರ್ಟ್‌ ಕೊಟ್ಟವರ ಮೇಲೆ ಕೇಸ್ ಹಾಕಿ, ಜೈಲಿಗೆ ಹಾಕಲಿ. ರಾಜ್ಯದ ಜನ ದಂಗೆ ಏಳ್ತಾರೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES