Saturday, May 18, 2024

ಅಭಿಯಾನವಾಗಿ ಬದಲಾದ ‘ಮೋದಿ ಕಾ ಪರಿವಾರ್’ : ಎಕ್ಸ್​ನಲ್ಲಿ ಟ್ರೆಂಡಿಂಗ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಗೆ ಪರಿವಾರವೇ ಇಲ್ಲ. ಅವರಿಗೆ ಮಕ್ಕಳಿಲ್ಲ ಎಂದು ಟೀಕಿಸಿದ್ದ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಹೇಳಿಕೆಗೆ ಬಿಜೆಪಿಗರು ತಿರುಗೇಟು ನೀಡಿದ್ದಾರೆ.

ಲಾಲು ಪ್ರಸಾದ್ ಹೇಳಿಕೆ ಬೆನ್ನಲ್ಲೇ ಬಿಜೆಪಿ ನಾಯಕರು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ತಮ್ಮ ಹೆಸರಿನ ಮುಂದೆ ‘ಮೋದಿ ಕಾ ಪರಿವಾರ್’ ಎಂದು ಬದಲಿಸಿಕೊಂಡಿದ್ದಾರೆ.

ಈ ಮೂಲಕ ಲಾಲು ಪ್ರಸಾದ್ ಸೇರಿದಂತೆ ವಿಪಕ್ಷಗಳಿಗೆ ಕೌಂಟರ್ ನೀಡುವ ಮೂಲಕ ನಾವು ಕೂಡ ಮೋದಿಯ ಪರಿವಾರ ಎಂಬಂತೆ ತಿರುಗೇಟು ಕೊಟ್ಟಿದ್ದಾರೆ. ಈ ನಡುವೆ ಇಂಡಿಯಾ ಮೈತ್ರಿಕೂಟದ ಪಕ್ಷಗಳು ನಮ್ಮ ಒಗ್ಗಟ್ಟನ್ನು ಕಂಡು ಬಿಜೆಪಿ ಹೆದರಿದೆ ಎಂದು ಲೇವಡಿ ಮಾಡುತ್ತಿದೆ.

140 ಕೋಟಿ ಜನರು ನನ್ನ ಕುಟುಂಬ

ತೆಲಂಗಾಣದ ಆದಿಲಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ದೇಶದಲ್ಲಿನ ರಾಜವಂಶದ ಪಕ್ಷಗಳು ವಿಭಿನ್ನ ಮುಖಗಳನ್ನು ಹೊಂದಿರಬಹುದು. ಆದರೆ, ಲೂಟಿ ಮಾಡುವುದೇ ಅವರ ಉದ್ದೇಶ. ದೇಶದ 140 ಕೋಟಿ ಜನರು ನನ್ನ ಕುಟುಂಬ ಎಂದು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಲಾಲು ಪ್ರಸಾದ್ ಯಾದವ್ ಅವರಿಗೆ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES