Monday, May 20, 2024

ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಶೇ.100ರಷ್ಟು ನನಗೆ ಸಿಗಲಿದೆ: ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ಲೋಸಕಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಟಿಕೆಟ್ ಶೇ.100ರಷ್ಟು ನನಗೆ ಸಿಗಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್​ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತದೆ. ಕರ್ನಾಟಕದಲ್ಲಿ ಯಾವಾಗ ಅಭ್ಯರ್ಥಿ ಪಟ್ಟಿ ಬರುತ್ತೊ ಆವಾಗಲೇ ನಮ್ಮದು ಕೂಡ ಬರುತ್ತದೆ. ಶುಭ ಸಮಾರಂಭಕ್ಕೆ 5 ವರ್ಷದಲ್ಲಿ ಭಾಗವಹಿಸಿದ್ದೇನೆ‌. ಆದರೆ, ಈ ಸಂದರ್ಭದಲ್ಲಿ ಅದು ಹೈಲೆಟ್ ಆಗ್ತಿದೆ ಅಷ್ಟೇ. ಟಿಕೆಟ್‌ಗಾಗಿ ನಾನು ಡೆಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ. ನನ್ನನ್ನು ಬರಲು ಹೇಳಿದ್ರೆ ಮಾತ್ರ ಹೋಗ್ತೇನೆ. ಆ ತರಹದ ಪ್ಲಾನ್ ಆಗಿಲ್ಲ ಎಂದು ಹೇಳಿದ್ದರು.

ಚುನಾವಣೆ ಎದುರಿಸಲು ಯಾವುದೇ ನಿರ್ಧಿಷ್ಟ ಪ್ಲಾನ್ ಮಾಡಿಲ್ಲ

ಸದ್ಯಕ್ಕೆ ಮಂಡ್ಯದಲ್ಲಿ ಚುನಾವಣೆ ಎದುರಿಸಲು ಯಾವುದೇ ನಿರ್ಧಿಷ್ಟ ಪ್ಲಾನ್ ಮಾಡಿಲ್ಲ.ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆನು. ಆಗ ನನಗೆ ಯಾವುದೇ ಅನುಭವ ಇರಲಿಲ್ಲ. ನನಗೆ ಬೇಕಾದವರು ನಿಮ್ಮ ಜೊತೆ ಇರ್ತೇವೆ ಅಂತ ಗಟ್ಟಿಯಾಗಿ ನಿಂತಿದ್ದರು. ಇವಾಗ ಸಂದರ್ಭ ಬೇರೆ ಇರುತ್ತದೆ. ಜೊತೆಗೆ, ಒಂದು ಚಿಹ್ನೆಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಪಕ್ಷ ಹಾಗೂ ಪಕ್ಷದ ಲೀಡರ್ ಏನು ಹೇಳ್ತಾರೆ ನೋಡಬೇಕು. ಆದ್ದರಿಂದ ಈಗ ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ. ಪ್ರಚಾರ, ಹೋರಾಟ, ಕ್ಯಾಂಪೇನ್ ಡಿಫೆರೆಂಟ್ ಇರುತ್ತದೆ ಎಂದು ಹೇಳಿದರು.

ಪ್ರಚಾರಕ್ಕೆ ಯಶ್ದರ್ಶನ್ ಬರದಿದ್ದರೂ ಬೇಜಾರ್ ಮಾಡ್ಕೊಳ್ಳಲ್ಲ

ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಕ್ಕೆ ರಾಜ್ಯದ ಇಬ್ಬರು ಸ್ಟಾರ್‌ ನಟರಾದ ಯಶ್ ಮತ್ತು ದರ್ಶನ್ 25 ದಿನಗಳ ಕಾಲ ನನ್ನ ಜೊತೆಗಿದ್ದು ಪ್ರಚಾರ ಮಾಡಿದ್ದರು. ಅವರಿಬ್ಬರು ನನಗೋಸ್ಕರ ಬರಿ ಸಪೋರ್ಟ್ ಅಲ್ಲ, ತ್ಯಾಗವನ್ನೇ ಮಾಡಿದ್ದರು. ಯಾವುದೇ ಸ್ವಾರ್ಥ ಇಲ್ಲದೆ ನನ್ನ ಪರ ನಿಂತಿದ್ದರು. ಆದರೆ, ಪದೇ ಪದೇ ಎಲ್ಲ ಬಿಟ್ಟು ಬನ್ನಿ ಅನ್ನೋದು ಸರಿಯಲ್ಲ. ನನಗೆ ಮನಸ್ಸು ಒಪ್ಪಲ್ಲ. ಅವರು ಯಶ್, ದರ್ಶನ್ ಒಂದೊಂದು ಮೂವಿ ಮಾಡ್ತಿರುತ್ತಾರೆ. ಅದನ್ನೆಲ್ಲ ಬಿಟ್ಟು ಬನ್ನಿ ಅನ್ನೋದು ಸರಿಯಲ್ಲ. ಅವರು ಬಂದರೆ ಖಂಡಿತವಾಗಿಯೂ ಹಾರ್ಟ್ಲಿ ವೆಲ್ ಕಮ್ ಮಾಡ್ತೇನೆ. ದೊಡ್ಡ ಶಕ್ತಿಯಾಗಿ ನನಗೆ ಇರುತ್ತದೆ ಎಂದು ತಿಳಿಸಿದರು.

ಪ್ಯಾನ್ಇಂಡಿಯಾ ಸ್ಟಾರ್ ಪ್ರಚಾರಕ್ಕೆ ಬರಬೇಕೆಂಬ ನಿರೀಕ್ಷೆ ಸರಿಯಲ್ಲ

ಇನ್ನು ಯಶ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲ್ಲ, ರಾಜಕಾರಣ ಗಲಿಜು ಅಂತ ಹೇಳಿದ್ದಾರೆ. ಇನ್ನು ರಾಜಕಾರಣದ ಬಗ್ಗೆ ಅವರು ಟೀಕೆ ಎದುರಿಸಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಅವರು ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ. ಅವರು ಬರ್ತಿನಿ ಅಂದರೆ ಸಂತೋಷ ಪಡ್ತೇನೆ. ನನ್ನ ಮನೆಯ ಮಕ್ಕಳು ತರ ಓಡಾಡಿದ್ದಾರೆ. ಅವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಅವರು ಬರಲಿಲ್ಲ ಅಂದ್ರು ನಾನು ಬೇಜಾರ್ ಮಾಡ್ಕೋಳಲ್ಲ ಎಂದು ತಿಳಿಸಿದರು.

 

RELATED ARTICLES

Related Articles

TRENDING ARTICLES