Monday, May 20, 2024

ಜಾತಿಗಣತಿಯ ಹೆಸರಲ್ಲಿ ಕಾಂಗ್ರೆಸ್ ಇಡೀ ಸಮಾಜವನ್ನೇ ಛಿದ್ರ ಮಾಡುತ್ತಿದೆ : ಕೆ.ಎಸ್.​ ಈಶ್ವರಪ್ಪ

ಶಿವಮೊಗ್ಗ: ಜಾತಿಗಣತಿಯ ಹೆಸರಲ್ಲಿ ಕಾಂಗ್ರೆಸ್ ಇಡೀ ಸಮಾಜವನ್ನು ಛೀದ್ರ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕರ್ನಾಟಕ ರಾಜ್ಯದ ಜಾತಿಗಣತಿ ವರದಿಯನ್ನು ನಿನ್ನೆ ದಿನ ಜಯಪ್ರಕಾಶ್ ಹೆಗ್ಡೆ ಅವರು ಸಿಎಂಗೆ ಕೊಟ್ಟಿದ್ದಾರೆ ಎಲ್ಲರೂ ನಾನೇ ಜಾತಿಯ ನಾಯಕ ಎಂಬ ಪ್ರತಿಬಿಂಬ ಪಡೆಯೋಕೆ ಹೊರಟಿದ್ದಾರೆ ಇದರಿಂದ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ.ಜಾತಿಗಣತಿ ಅಸ್ತ್ರ ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಹೊರಟಿದೆ ಈ ಮೂಲಕ ಸಮಾಜವನ್ನು ಛೀದ್ರ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಹೊರಟಿದೆ

ನಾನೇ ಜಾತಿ ಗಣತಿ ವರದಿ ಸ್ವೀಕರಿಸಿದ್ದು ಎಂಬ ಹೆಗ್ಗಳಿಕೆ ಪಡೆಯಲು ವರದಿ ಸ್ವೀಕರಿಸಿದ್ದಾರೆ ಅನೇಕರು ಬೇರೆ ಬೇರೆ ಕಾರಣಗಳಿಂದ ವರದಿಗೆ ವಿರೋದ ವ್ಯಕ್ತವಾಗಿತ್ತು. ಡಿಸಿಎಂ ಡಿಕೆಶಿ ಸಹಿ ಸಂಗ್ರಹ ಮಾಡಿದ್ದರು.  ಜಾತಿಗಣತಿ ಅಸ್ತ್ರ ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಹೊರಟಿದೆ ಎಂದರು.

ನಾವೇ ಜಾತಿ ನಾಯಕರು ಎಂಬ ಬಿರುದು ಪಡೆಯಲು ಪ್ರಯತ್ನ

ಕಾಂಗ್ರೆಸ್ ನಾಯಕರು ಈ ವರದಿಗೆ ವಿರೋಧ ವ್ಯಕ್ತ ಪಡಿಸಿದ್ದಾರ ವೈಜ್ಞಾನಿಕ ವಾಗಿ ಇಲ್ಲ ಅಂತ ಬಹಿರಂಗ ವಾಗಿ ಹೇಳಿದ್ದಾರೆ. ಎಲ್ಲರೂ ನಾನೇ ಜಾತಿಯ ನಾಯಕ ಎಂಬ ಪ್ರತಿಬಿಂಬ ಮಾಡಲು ಸಾಕಷ್ಟು ಪ್ರಯತ್ನ ಮಾಡಿ ಇಡಿ ಸಮಾಜ ಗೊಂದಲ ಮಾಡಿದ್ದಾರೆ. ಹಿಂದುಳಿದ ವರ್ಗದ ನಾಯಕ ನಾನು ನಾನೇ ಜಾತಿ ಜನಗಣತಿ ವರದಿ ಸ್ವೀಕಾರ ಮಾಡಿದ್ದು ನಾನೇ ಎಂಬ ಹೆಗ್ಗಳಿಕೆ ಪಡೆಯಲು ಮುಂದಾಗಿದ್ದಾರೆ ಲಿಂಗಾಯ್ತರು ನಾವೇ ಜಾತಿ ನಾಯಕರು ಎಂಬ ಬಿರುದು ಪಡೆಯಲು ಆ ನಾಯಕರು ವಿರೋಧ ಮಾಡ್ತಿದ್ದಾರೆ.

ಜಾತಿ ಜನಗಣತಿಗ 150-200 ಕೋಟಿ ವೆಚ್ಚ 

ಡಿಕೆಶಿ ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳಲು ವಿರೋಧ ಮಾಡ್ತಿದ್ದಾರೆ ಜಾತಿ ಜನಗಣತಿ ಮಾಡಬೇಕಾದವರು ಯಾರು ಅಂದ್ರೆ ಕೇಂದ್ರ ಸರಕಾರ ಇದು ರಾಜ್ಯ ಸರ್ಕಾರದ ಕೆಲಸ ಅಲ್ಲ ಇದು ಗೊತ್ತಿದ್ದರೂ 150-200 ಕೋಟಿ ವೆಚ್ಚ ಮಾಡಿದ್ದಾರೆ.

ಕಾಂಗ್ರೆಸ್ ನ ಎಂಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿ ವರದಿ ವಿರೋಧ ಮಾಡಿದ್ದಾರೆ ಈ ವರದಿ 9 ವರ್ಷದ ಹಿಂದೆ ತಯಾರಿಸಿದ ವರದಿ 9 ವರ್ಷದ ಹಿಂದೆಯೇ ಕಾಂತರಾಜ್ ವರದಿ ರೆಡಿ ಇದೆ ಅಂದಿದ್ದರು ಸಿಎಂ ಹೇಳಿದರೆ ವರದಿ ಬಿಡುಗಡೆ ಮಾಡ್ತೀನಿ ಎಂದಿದ್ದರು ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ವೇಳೆಯೂ ಬಿಡುಗಡೆ ಮಾಡಲಿಲ್ಲ ಏಕೆ ಬಿಡುಗಡೆ ಮಾಡಲಿಲ್ಲ ಅಂದ್ರೆ ಸಿಎಂ ಕುಮಾರಸ್ವಾಮಿ ಒಪ್ಪಲಿಲ್ಲ ಅಂದ್ರು ನೀವು ವರದಿ ತಗೋಬೇಕಾದರೆ ಕ್ಯಾಬಿನೆಟ್ ನಲ್ಲಿ ಕುಳಿತು ಚರ್ಚೆ ಮಾಡಬಹುದಿತ್ತು ನಾನು ಈ ಸಮಾಜದ ನಾಯಕ ಆಗಬೇಕು ಅಂತಾ ವರದಿ ಸ್ವೀಕಾರ ಮಾಡಿದ್ದಾರೆ.

ನಾನು ಛೀಮಾರಿ‌ ಹಾಕ್ತೇನೆ

ಕಾಂಗ್ರೆಸ್ ಪಕ್ಷ ಸಮಾಜವನ್ನು ಛಿದ್ರ ಛಿದ್ರ ಮಾಡ್ತಿದೆ ವರದಿಗೆ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಕಾಂಗ್ರೆಸ್ ಸರಕಾರ ಹಿಂದು ಸಮಾಜವನ್ನು ಹೊಡೆದು ಛಿದ್ರ ಛಿದ್ರ ಮಾಡ್ತಿದೆ ಅಮಿತ್ ಶಾ ಅವರು ದೇಶದ ಎಲ್ಲಾ ಪ್ರಮುಖರನ್ನು ಕರೆದು ಚರ್ಚೆ ಮಾಡಿದ್ರು ಸಂವಿಧಾನ ಏನು ಹೇಳುತ್ತದೆ, ಸುಪ್ರೀಂ ಕೋರ್ಟ್ ಏನು ಹೇಳುತ್ತದೆ, ತಜ್ಞರು ಏನು ಹೇಳ್ತಾರೆ ಅಭಿಪ್ರಾಯ ಪಡೆದು ವರದಿ ಬಿಡುಗಡೆ ಮಾಡ್ತೇವೆ ಅಂತಾ ಅಮಿತ್ ಶಾ ಹೇಳಿದ್ದರು ಚುನಾವಣೆ ಸಂದರ್ಭದಲ್ಲಿ ಈ ವರದಿ ಸ್ವೀಕಾರ ಮಾಡಿದ್ದಾರೆ. ಇದಕ್ಕೆ ನಾನು ಛೀಮಾರಿ‌ ಹಾಕ್ತೇನೆ.

ಸಮಾಜವನ್ನು ಛಿದ್ರ ಛಿದ್ರ ಮಾಡುವ ಕೆಲಸ ಮಾಡಬೇಡಿ

ಜಾತ್ಯಾತೀತ ಪಕ್ಷ ಅಂತೇಳುವ ಕಾಂಗ್ರೆಸ್ ಈ ವರದಿ ಸ್ವೀಕಾರದ ವೇಳೆ ಕಾನೂನಾತ್ಮಕ‌ ಚಿಂತನೆ ನಡೆಸಬೇಕಿತ್ತು ವರದಿ ಸ್ವೀಕಾರದ ಮೂಲಕ ಸಿದ್ದರಾಮಯ್ಯ ಕೆಟ್ಟ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಚರ್ಚೆಗೆ ಬಂದ್ರೆ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರೇ ಹೊಡೆದಾಡ್ತಾರೆ ಸಮಾಜ ಛಿದ್ರ ಮಾಡಲು ಕಾಂಗ್ರೆಸ್ ‌ಪ್ರಯತ್ನ ಮಾಡಿದೆ ವರದಿ ಸಲ್ಲಿಕೆಗೂ‌ ಮೊದಲೇ ಸೋರಿಕೆ ಆಗಿದೆ ಸೋರಿಕೆ ಆಗಿಲ್ಲ ಎನ್ನುವುದಾದರೆ ಮಾಧ್ಯಮಗಳಲ್ಲಿ ಯಾವ ಯಾವ ಜಾತಿಯವರು ಎಷ್ಟಿದೆ ಅಂತಾ ಪ್ರಕಟವಾಗಿದೆ ಹಾಗಿದ್ದರೆ ಮಾಧ್ಯಮಗಳಲ್ಲಿ ಏಕೆ ಪ್ರಕಟವಾಯ್ತು ಸಮಾಜವನ್ನು ಛಿದ್ರ ಛಿದ್ರ ಮಾಡುವ ಕೆಲಸ ಮಾಡಬೇಡಿ ಹಿಂದು ಸಮಾಜ ಒಗ್ಗಟ್ಟಾಗುತ್ತಿದೆ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನವರು ಒಡೆಯುವ ಕೆಲಸ ಮಾಡಬೇಡಿ ಚುನಾವಣಾ ಸಂದರ್ಭದಲ್ಲಿ ತನಗೆ ಲಾಭ ಆಗಬಹುದು ಎಂಬ ಕಾರಣದಿಂದ ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ

ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದನ್ನು ಎಫ್ ಎಸ್ ಎಲ್ ವರದಿಯಲ್ಲಿ ಯಾವುದು ತಿರುಚಿಲ್ಲ ಅಂತಾ ವರದಿ ಬಂದಿದೆ.ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿಯೇ ಇಲ್ಲ ಇದು ಬಿಜೆಪಿ ಸೃಷ್ಟಿ ಅಂತಾ ಡಿಕೆಶಿ, ಪ್ರಿಯಾಂಕ ಖರ್ಗೆ ಹೇಳ್ತಾರೆ ಸಚಿವರು ಈ ರೀತಿ ಹೇಳಿದರೆ ಇನ್ನೂ ವರದಿ ಎಲ್ಲಿಂದ ಬಂತು.

ರಾಷ್ಟ್ರ ದ್ರೋಹಿಗಳ ಪರ ಇದ್ದೇವೆ ಅಂತಾ ಡಿಕೆಶಿ, ಪ್ರಿಯಾಂಕ ಖರ್ಗೆ, ಹೆಬ್ಬಾಳ್ಕರ್ ನೇರವಾಗಿ ಬೆಂಬಲ ಕೊಟ್ಟಿದ್ದಾರೆ. ಹೃದಯ ಕಣ್ಣು ಕಿವಿ ಸರಿ ಇಲ್ಲದ ಕಾಂಗ್ರೆಸ್ ನಾಯಕರು ಇನ್ನೇನು ಹೇಳಲು ಸಾಧ್ಯ ಶೀಘ್ರವಾಗಿ ಎಫ್ ಎಸ್ ಎಲ್ ವರದಿ ಬಹಿರಂಗ ಮಾಡಬೇಕು ಎಂದರು.

ಹೆಬ್ಬಾರ್ ಅವರು ಮತ ಹಾಕಿಲ್ಲ

ಎಸ್​.ಟಿ ಸೋಮಶೇಖರ್ ಅವರು ಅಡ್ಡ ಮತದಾನ ಹಾಕಿದ್ದಾರೆ ಈ ರೀತಿ ಭಂಡತನಕ್ಕೆ ಒಬ್ಬೊಬ್ವರೇ ಸೇರಿಕೊಂಡಿದ್ದಾರೆ. ಡಿಕೆಶಿ ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು ಅಲ್ಲಿಯ ಶಾಸಕರು ಅಡ್ಡ ಮತ ಹಾಕಿದರುಅಲ್ಲಿ‌ನ ಸ್ಪೀಕರ್ ಅನರ್ಹಗೊಳಿಸಿದರು.ಕರ್ನಾಟಕದಲ್ಲಿ ಏಕೆ ಸೋಮಶೇಖರ್ ಅವರನ್ನು ಸ್ಪೀಕರ್ ಅನರ್ಹಗೊಳಿಸಲಿಲ್ಲ ಇದು ರಾಜ್ಯದಲ್ಲಿ ಹೆಚ್ಚು ದಿನ ನಡೆಯುವುದಿಲ್ಲ. ಖಾದರ್ ಅವರು ನಿಜಕ್ಕೂ ಸಭಾಧ್ಯಕ್ಷರು ಆಗಿದ್ದರೇ ಸೋಮಶೇಖರ್ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದರು.

ದೇಶದಲ್ಲಿ ‌ಕಾಂಗ್ರೆಸ್ ನಿರ್ನಾಮ ಆಗ್ತಿದೆ

ಸರ್ಕಾರ ಬಂದ ಆರಂಭದಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಅಂತಿದ್ದರು ಒಬ್ಬನೇ ಒಬ್ಬ ನಮ್ಮ ಶಾಸಕ ಕಾಂಗ್ರೆಸ್ ಗೆ ಹೋಗಿಲ್ಲ.ಇಡೀ ದೇಶದಲ್ಲಿ ‌ಕಾಂಗ್ರೆಸ್ ನಿರ್ನಾಮ ಆಗ್ತಿದೆ.ಇನ್ನು ದೇಶದಲ್ಲಿ ಎಲ್ಲಿ ಉಳಿಯುತ್ತದೆ ಕಾಂಗ್ರೆಸ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನ ಪಡೆಯುತ್ತದೆ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES