Monday, May 20, 2024

ಜಾತಿಗಣತಿ ವರದಿ: ಯಾವ ಸಮುದಾಯದಲ್ಲಿ ಎಷ್ಟು ಜನಸಂಖ್ಯೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಬೆಂಗಳೂರು: ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಅವರು ಅಧಿಕೃತವಾಗಿ ಸ್ವೀಕಾರ ಮಾಡಿದ್ದಾರೆ.

ಹೌದು ರಾಜ್ಯರಾಜಕಾರಣದಲ್ಲಿ ಬಿರುಗಾಳಿಯೆಬ್ಬಿಸಿದ ಜಾತಿಗಣತಿ ವರದಿ ಬಹಿರಂಗವಾಗಿದ್ದು,ಕರ್ನಾಟಕದಲ್ಲಿ ಯಾವ ಜಾತಿ ಹಾಗೂ ಧರ್ಮದವರು ಎಷ್ಟು ಮಂದಿ ಇದ್ದಾರೆ ಎಂದು ವರದಿ ತಿಳಿಸಿದೆ.

ಒಟ್ಟು 5.98 ಕೋಟಿ ಜನ ಸಮೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಮೂಲಗಳ ಪ್ರಕಾರ, ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿದೆ.

ಇದನ್ನೂ ಓದಿ: Bengaluru Film Festival: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ

ವರದಿಯ ಅನ್ವಯ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ ) ಸಮುದಾಯ ಅತಿ ಹೆಚ್ಚು ಜನಸಂಖ್ಯೆ (1.08 ಕೋಟಿ) ಹೊಂದಿದೆ. ಇದರೊಂದಿಗೆ ರಾಜ್ಯದ ದೊಡ್ಡ ಸಮುದಾಯಗಳಲ್ಲಿ ಪರಿಶಿಷ್ಟ ಜಾತಿ ಪ್ರಥಮ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ ಇದೆ. ಇನ್ನು ಲಿಂಗಾಯತ  ಮತ್ತು ಒಕ್ಕಲಿಗ ಸಮುದಾಯ  ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಒಟ್ಟು 816 ಇತರ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ.

ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನು ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ.

ಜಾತಿವಾರು ಜನಸಂಖ್ಯೆಯ ವಿವರ ಹೀಗಿದೆ

ಪರಿಶಿಷ್ಟ ಜಾತಿ(ಎಸ್’ಸಿ)- 1.08 ಕೋಟಿ ಜನಸಂಖ್ಯೆ ಹೊಂದಿದೆ.
ಮುಸ್ಲಿಂ- 70 ಲಕ್ಷ ಜನಸಂಖ್ಯೆ
ಲಿಂಗಾಯತ- 65 ಲಕ್ಷ ಜನಸಂಖ್ಯೆ
ಒಕ್ಕಲಿಗ- 60 ಲಕ್ಷ ಜನಸಂಖ್ಯೆ
ಕುರುಬರು- 45 ಲಕ್ಷ ಜನಸಂಖ್ಯೆ
ಈಡಿಗ- 15 ಲಕ್ಷ ಜನಸಂಖ್ಯೆ
ಪರಿಶಿಷ್ಟ ಪಂಗಡ (ಎಸ್‌ಟಿ)- 40.45 ಲಕ್ಷ ಜನಸಂಖ್ಯೆ
ವಿಶ್ವಕರ್ಮ- 15
ಬೆಸ್ತ- 15 ಲಕ್ಷ
ಬ್ರಾಹ್ಮಣ- 14 ಲಕ್ಷ
ಗೊಲ್ಲ (ಯಾದವ) – 10 ಲಕ್ಷ
ಮಡಿವಾಳ ಸಮಾಜ – 6
ಅರೆ ಅಲೆಮಾರಿ – 6 ಲಕ್ಷ
ಕುಂಬಾರ – 5 ಲಕ್ಷ
ಸವಿತಾ ಸಮಾಜ – 5 ಲಕ್ಷ

RELATED ARTICLES

Related Articles

TRENDING ARTICLES