Saturday, May 4, 2024

ಪಾಕಿಸ್ತಾನ ಜಿಂದಾಬಾದ್ ಎಂದು ನಾನು ಘೋಷಣೆ ಕೂಗಿಲ್ಲ : ಮೊಹಮ್ಮದ್ ಶಫಿ ನಾಶಿಪುಡಿ

ಹಾವೇರಿ : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ ಆರೋಪ ಹಿನ್ನೆಲೆ ಮೊಹಮ್ಮದ್ ಶಫಿ ನಾಶಿಪುಡಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಮೊಟೇಬೆನ್ನೂರಿನಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನ ಜಿಂದಾಬಾದ್ ಅಂತ ನಾನು ಘೋಷಣೆ ಕೂಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ವಿಧಾನಸೌಧದಲ್ಲಿ ನಾನು ಇದ್ದಿದ್ದು ನಿಜ. ಎಲ್ಲರೂ ಜೈಕಾರ ಹಾಕಿದರು, ನಾನು ಸಹ ಜೈಕಾರ ಹಾಕಿದೆ. ನನ್ನ ಮೇಲೆ ಬರುತ್ತಿರುವ ಆರೋಪ ಸುಳ್ಳು. ಸೂಕ್ತ ತನಿಖೆ ಮಾಡಿ, ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ. ಪಾಕಿಸ್ತಾನ ಜಿಂದಾಬಾದ್ ಅಂತಾ ನಾನು ಹೇಳಿಲ್ಲ ಎಂದು ತಿಳಿಸಿದ್ದಾರೆ.

ನಾನು ನಾಸೀರ್ ಸರ್ ಬೆಂಬಲಿಗ

ನಾನು ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ನಾನು ನಾಸೀರ್ ಸರ್ ಅವರ ಬೆಂಬಲಿಗ. ಯಾರು ಘೋಷಣೆ ಕೂಗಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಲಿ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕೇಳಿದರು. ನಾನು ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ನನ್ನ ಮೇಲೆ ಬಂದಿರುವ ಆರೋಪ ಸುಳ್ಳು ಎಂದು ಮೊಹಮ್ಮದ್ ಶಫಿ ನಾಶಿಪುಡಿ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES