Friday, May 17, 2024

ಪಾಕಿಸ್ತಾನಕ್ಕೆ ಜೈಕಾರ ಹಾಕಿದವರು ಯಾರೇ ಆದರೂ ದೇಶದ್ರೋಶಹಿಗಳು: ಸಚಿವ ಜಮೀರ್​ ಅಹ್ಮದ್​

ಬೆಂಗಳೂರು:  ವಿಧಾನಸೌಧದಲ್ಲಿ ಮಂಗಳವಾರ ರಾಜ್ಯಸಭೆ ಚುನಾವಣೆ ಫಲಿತಾಂಶದ ವೇಳೆ ಕೇಳಿಬಂದ ಪಾಕಿಸ್ತಾನ್ ಜಿಂದಾಬಾದ್​ ಕೂಗಿನ ಕುರಿತು ಸಚಿವ ಜಮೀರ್​ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಜೈಕಾರ ಹಾಕಿದವರು ಯಾರೇ ಆದರೂ ಅಂಥವರಗೆ ಕಠಿಣ ಶಿಕ್ಷ ಆಗಲೇಬೇಕು ಅಂಥವರನ್ನು ನಾನು ದೇಶದ್ರೋಹಿ ಎಂದು ಹೇಳುತ್ತೇನೆ ಎಂದರು.

ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಕೂಗು ಯಾರೇ ಹೇಳಿದ್ದರು ಅವರ ವಿರುದ್ದ ಕಠಿಣ ಕ್ರಮ: ಸಿಎಂ

ಬಿಜೆಪಿಯವರು ನೆನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ಹತಾಶೆಯಿಂದ ಮಾತನಾಡುತ್ತಿದ್ದಾರೆ, ಈ ಕುರಿತು ನಾಸೀರ್​ ಹುಸೇನ್ ನೆನ್ನೆಯೇ ಪ್ರತಿಕ್ರಿಯಿಸಿ ಅಲ್ಲಿದ್ದ ಜನರು ನಾಸೀರ್ ಸಾಬ್ ಜಿಂದಾಬಾದ್​ ಎಂದು ಅಷ್ಟೆ ಕೂಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಈಗಾಗಲೇ ಎಫ್​ಎಸ್​ಎಲ್​ ಗೆ ಕಳಿಸಿಲಾಗಿದೆ ತನಿಖೆ ನಡೆಯುತ್ತಿದೆ. ಈ ಕುರಿತು ವರದಿ ಬರಬೇಕಿದೆ ಎಂದು ಅವರು ಹೇಳಿದರು.

ಸಿಎಂ ರಾಜಿನಾಮೇ ಏಕೆ ನೀಡಬೇಕು?:

ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆಯ ವೇಳೆ ಪಾಕಿಸ್ತಾನದ ಪರವಾಗಿ ಜೈಕಾರ ಕೂಗಲಾಗಿದೆ ಇದಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೇ ನೀಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿದೆ ಎನ್ನುವ ವರರದಿಗಾರರ ಪ್ರಶ್ನೆಗೆ ಪ್ರಿತಿಕ್ರಿಯಿಸಿದ ಅವರು,  ಪಾಕಿಸ್ತಾನಕ್ಕೆ ಜೈಕಾರ ಕೂಗಿದವರು ಯಾರೇ ಆದರೂ ಅಂಥವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದೇವೆ, ಇದನ್ನು ನಾವು ಸಹಿಸುವುದಿಲ್ಲ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಮೇಲೆ ಸಿಎಂ ರಾಜಿನಾಮೆ ಪ್ರಶ್ನೆಯೇ ಬರುವುದಿಲ್ಲ ಎಂದರು.

RELATED ARTICLES

Related Articles

TRENDING ARTICLES