Thursday, May 2, 2024

ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್​ ಜಿಂದಾಬಾದ್​ ಘೋಷಣೆ

ಬೆಂಗಳೂರು: ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವು ಬೆನ್ನಲ್ಲೇ ವಿಧಾನಸೌಧದಲ್ಲಿ ಸೆಲಬ್ರೇಷನ್​ ಮಾಡಲಾಗುತ್ತಿತ್ತು. ಈ ವೇಳೆ ನಾಸೀರ್ ಹುಸೇನ್ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್​ ಜಿಂದಾಬಾದ್​ ಅನ್ನೋ ಘೋಷಣೆ ಕೂಗಿದ್ದಾರೆ.

ನಾಸೀರ್ ಹುಸೇನ್ ಗೆದ್ದು ಹೊರಗೆ ಬರುವಾಗ ಜಿಂದಾಬಾದ್ ನಾಸೀರ್ ಹುಸೇನ್ ಜಿಂದಾಬಾದ್,  ಜಿಂದಾಬಾದ್, ಜಿಂದಾಬಾದ್.. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. ಪಾಕ್ ಪರ ಘೋಷಣೆ ಬಗ್ಗೆ ಪ್ರತಿಕ್ರಿಯಿಸಲು ನಾಸೀರ್ ಹುಸೇನ್ ನಿರಾಕರಿಸಿ, ಪ್ರಶ್ನೆ ಮಾಡಿದ ಮಾಧ್ಯಮ ಸಿಬ್ಬಂದಿ ಮೇಲೆಯೇ ದರ್ಪ ತೋರಿದ್ದಾರೆ.

ನಾಸೀರ್ ಹುಸೇನ್ ಪಕ್ಕದಲ್ಲಿ ಇರುವಾಗಲೇ ಕಾರ್ಯಕರ್ತರು ಹೀಗೆ ಘೋಷಣೆ ಕೂಗಿದ್ದು ವಿವಾದಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES