Wednesday, May 15, 2024

ರಾಜ್ಯಸಭೆ ಚುನಾವಣೆಯಲ್ಲಿ S.T ಸೋಮಶೇಖರ್ ಅಡ್ಡ ಮತದಾನ?

ಬೆಂಗಳೂರು: ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಆದರೆ, ಈ ವೇಳೆ ‘ಆತ್ಮಸಾಕ್ಷಿಯಂತೆ ಮತ ಹಾಕಿದ್ದೇನೆ’ ಎಂದು ಅಡ್ಡ ಮತದಾನ ಮಾಡಿದ್ದಾರೆ.

ಮತದಾನಕ್ಕೂ ಮೊದಲು ಸುದ್ದಿಗಾರೊಂದಿಗೆ ಮಾತನಾಡಿದ ಅವರು11 ವರ್ಷದಿಂದ ಎಲ್ಲರಿಗೂ ಮತ ಹಾಕಿದ್ದೇನೆ. ಆದರೆ, ರಾಜ್ಯಸಭೆಗೆ ಆಯ್ಕೆ ಆದವರು ಒಂದು ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ. ನಾನು ಈ ಬಾರಿ ಆತ್ಮಸಾಕ್ಷಿಯಂತೆ ಮತ ಹಾಕುತ್ತೇನೆ.‌ ಕಳೆದ ಬಾರಿ (ಹಾಲಿ ಹಣಕಾಸು ಸಚಿವೆ) ನಿರ್ಮಲಾ ಸೀತಾರಾಮನ್ ಅವರಿಗೆ ಮತ ಹಾಕಿದ್ದೆ. ಆಮೇಲೆ ನಿರ್ಮಲಾ ಸೀತಾರಾಮನ್ ನನಗೆ ಭೇಟಿಗೆ ಅಪಾಯಿಟ್ಮೆಂಟ್ ಕೂಡ ಕೊಡಲೇ ಇಲ್ಲ,” ಎಂದು ಬೇಸರ ಹೊರಹಾಕಿದ್ದರು.

ನನಗೆ ಯಾರು ಪ್ರಾಮಿಸ್ ಮಾಡ್ತಾರೋ ಅವರಿಗೆ ನಾನು ನನ್ನ ಮತ ಹಾಕುತ್ತೇನೆ. ನೆಪ ಹೇಳುತ್ತಿಲ್ಲ. ಐದಾದು ಸರಿ ಹೇಳಿದ ಹಾಗೆ ಮತ ಚಲಾಯಿಸಿದ್ದೇನೆ. ಓಟು ಹಾಕಿಸಿಕೊಳ್ಳುವ ಮೊದಲು ಭರವಸೆ ನೀಡುತ್ತಾರೆ. 5 ಕೋಟಿ ರೂ. ಅನುದಾನ ಬರುತ್ತದೆ. ಆದರೆ, ಅದನ್ನು ನಮಗೆ ಕೊಡ್ತಾರಾ? ಆತ್ಮಸಾಕ್ಷಿಯಾಗಿ ಅಲ್ಲಿ (ವಿಧಾನಸೌಧಕ್ಕೆ) ಹೋಗಿ ಮತ ಚಲಾಯಿಸುತ್ತೇನೆ ಎಂದಿದ್ದರು.

ನಾನು ಮತದಾನ ಮಾಡಿದ್ದನ್ನು ಏಜೆಂಟ್‌ಗೆ ತೋರಿಸಿದ್ದೇನೆ,” ಎಂದು ಹೇಳಿದ್ದಾರೆ.

ಇನ್ನೂ ಬಾರದ ಶಿವರಾಂ ಹೆಬ್ಬಾರ್

ರಾಜ್ಯಸಭೆ ‌ಚುನಾವಣೆ ಮತದಾನ ಆರಂಭಗೊಂಡು ಹಲವು ಗಂಟೆಗಳು ಕಳೆದಿದ್ದರೂ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಇನ್ನೂ ಮತದಾನಕ್ಕೆ ಆಗಮಿಸಿಲ್ಲ. ಒಂದು ರೀತಿಯಲ್ಲಿ ಅವರ ಮಿತ್ರನಂತಿರುವ ಸೋಮಶೇಖರ್‌ ಮತದಾನ ಮಾಡಿದರೂ ಹೆಬ್ಬಾರ್‌ ಮಾತ್ರ ಇನ್ನೂ ವಿಧಾನಸೌಧದತ್ತ ಸುಳಿದಿಲ್ಲ.

 

 

 

RELATED ARTICLES

Related Articles

TRENDING ARTICLES