Friday, May 17, 2024

ರೈತನ ಬಟ್ಟೆ ಕೊಳಕಾದ ಕಾರಣಕ್ಕೆ ಮೆಟ್ರೋ ಏರಲು ಬಿಡದ ಸಿಬ್ಬಂದಿ ವಜಾಗೊಳಿಸಿದ ನಮ್ಮ ಮೆಟ್ರೋ

ಬೆಂಗಳೂರು: ಬಟ್ಟೆ ಕೊಳಕಾಗಿದೆ ಎನ್ನುವ ಕಾರಣಕ್ಕೆ ರೈತನನ್ನು ಮೆಟ್ರೋ ರೈಲಿನ ಒಳಗೆ ಬಿಡದೆ ತಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಮೆಟ್ರೋ ಸಿಬ್ಬಂದಿಗಳ ಅತಿರೇಕದ ವರ್ತನೆಗೆ ಕೂಡಲೇ ಬ್ರೇಕ್ ಬೀಳಬೇಕು ಎಂದಿದ್ದೇ ತಡ ಇದೀಗ ಬಿಎಂಆರ್‌ಸಿಎಲ್ ಸೆಕ್ಯೂರಿಟಿಯನ್ನು ಘಟನೆ ನಡೆದ ಅರ್ಧಗಂಟೆಯೊಳಗೆ ವಜಾಗೊಳಿಸಿದೆ.

ಇದನ್ನೂ ಓದಿ: ಮೊಹಮ್ಮದ್‌ ಶಮಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಮಾನವೀಯತೆಯನ್ನೇ ಮರೆತು ಬಿಟ್ಟರಾ ನಮ್ಮ ಮೆಟ್ರೋ ಸಿಬ್ಬಂದಿ? ದೇಶದ ಬೆನ್ನೆಲುಬು ರೈತನಿಗೆ ಬೆಂಗಳೂರು ಮೆಟ್ರೋದಲ್ಲಿ ಅವಮಾನ ಮಾಡಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಟಿಪ್ ಟಾಪ್ ಆಗಿ ಡ್ರೆಸ್ ಹಾಕೊಂಡ್ರೆ ಮಾತ್ರ ಮೆಟ್ರೋದೊಳಗೆ ಎಂಟ್ರಿನಾ? ಬಟ್ಟೆ ಕ್ಲೀನ್ ಇಲ್ಲ ಅಂತ ರೈತನನ್ನು ಮೆಟ್ರೋ ಒಳಗೆ ಬಿಡದ ಸಿಬ್ಬಂದಿ. ರಾಜಾಜಿನಗರ ನಮ್ಮ ಮೆಟ್ರೋ ಸಿಬ್ಬಂದಿಯಿಂದ ಅತಿರೇಕದ ವರ್ತನೆ. ಬಡ ರೈತನ ಮೇಲೆ ಸಿಬ್ಬಂದಿಯ ದುರಾಹಂಕಾರದ ವರ್ತನೆ ದೃಶ್ಯ ಸಹ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES