Sunday, May 12, 2024

ಅಪ್ಪು ಬರ್ತ್​ಡೇಗೆ ಜಾಕಿ ಚಿತ್ರ ರೀ ರಿಲೀಸ್​

ಬೆಂಗಳೂರು: ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್​ ರಾಜ್​ಕುಮಾರ್​ ಅವರು ನಮ್ಮನ್ನು ಅಗಲಿ ಮೂರು ವರ್ಷಗಳೂ ಅದ್ರೂ ಅವರು ಮಾತ್ರ ಸದಾ ಎಲ್ಲಾರ ಮನದಲ್ಲಿ ಜೀವಂತವಾಗಿಯೇ ಇದ್ದಾರೆ.

ಹೌದು, ಅತಿ ಚಿಕ್ಕಮಯಸ್ಸಿನಲ್ಲಿ ಅಪಾರ ಜನರ ಪ್ರೀತಿ ಗಳಿಸಿರುವ ಅಪ್ಪು ಹುಟ್ಟು ಹಬ್ಬಕ್ಕೆ ಒಂದೆಲ್ಲಾ ಒಂದು ಸರ್ಪ್ರೈಸ್  ಇದ್ದೇ ಇರುತ್ತದೆ. ಹಾಗೆಯೇ ಈ ಬಾರಿ ಕೂಡ ಅಭಿಮಾನಿಗಳಿಗೆ PRK ಸ್ಟುಡಿಯೋಸ್​ ಕಡೆಯಿಂದ ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ನಟನೆಯ ‘ಜಾಕಿ’ ಸಿನಿಮಾಕ್ಕೆ ಹೊಸದಾಗಿ ಮಾಸ್ಟರಿಂಗ್ ಮಾಡಿಸಿದ್ದು, ಕೆಆರ್‌ಜಿ ಸ್ಟುಡಿಯೋಸ್ ಮೂಲಕ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ.

ಪುನೀತ್ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ಇದು ದೊಡ್ಡ ಉಡುಗೊರೆಯಾಗಿದ್ದು, ಫ್ಯಾನ್ಸ್‌ ಈಗಾಗಲೇ ಸಖತ್ ಖುಷಿಯಾಗಿದ್ದಾರೆ.

 ಮಾರ್ಚ್​ 15ಕ್ಕೆ ‘ಜಾಕಿ’ ಸಿನಿಮಾ ರೀ-ರಿಲೀಸ್

ಜಾಕಿ ಸಿನ್ಮಾವನ್ನುಅದ್ದೂರಿಯಾಗಿ ವೆಲ್‌ಕಮ್ ಮಾಡುವುದಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ.

ಸ್ಪೆಷಲ್ ಪೋಸ್ಟ್ ಹಂಚಿಕೊಂಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್

‘ಜಾಕಿ’ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ಪೆಷಲ್ ಪೋಸ್ಟ್ ನಲ್ಲಿ  ಅವರು ಈ ರೀತಿ ಬರೆದುಕೊಂಡಿದ್ಧಾರೆ. “ಪ್ರೇಕ್ಷಕರ ನೆಚ್ಚಿನ ‘ಜಾಕಿ’ ಮಾರ್ಚ್ 15ರಂದು ಮತ್ತೊಮ್ಮೆ ನಿಮ್ಮೆಲ್ಲರನ್ನ ರಂಜಿಸಲು ಸಿದ್ಧವಾಗಿದೆ..” ಎಂದು ಹೇಳಿದ್ದಾರೆ.

ದುನಿಯಾ’ ಸೂರಿ ಮೊದಲ ಬಾರಿಗೆ ಪುನೀತ್ ರಾಜ್‌ಕುಮಾರ್‌ ಜೊತೆ ಕೈಜೋಡಿಸಿದ್ದು ‘ಜಾಕಿ’ ಸಿನಿಮಾಕ್ಕಾಗಿ. ಈ ಸಿನಿಮಾವನ್ನು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರೆ, ಸೂರಿ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದರು. ವಿ ಹರಿಕೃಷ್ಣ ಸಂಯೋಜನೆಯ ಎಲ್ಲ ಹಾಡುಗಳನ್ನು ಬರೆದಿದ್ದು ಯೋಗರಾಜ್ ಭಟ್. ಈ ಸಿನಿಮಾದ ಹಾಡುಗಳು ಈಗಲೂ ಕೂಡ ಕೇಳುಗರ ಫೇವರೆಟ್ ಎನಿಸಿಕೊಂಡಿವೆ.

RELATED ARTICLES

Related Articles

TRENDING ARTICLES