Friday, May 17, 2024

ISRO: ಭಾರತೀಯ ಗಗನಯಾತ್ರಿಗಳ ಹೆಸರು ಘೋಷಿಸಿದ ಮೋದಿ

ತಿರುವನಂತಪುರಂ: ಮುಂದಿನ ವರ್ಷ ISRO ವತಿಯಿಂದ ಮೊದಲ ಮಾನವಸಹಿತ ಗಗನಯಾತ್ರೆಗೆ ತಯಾರಿ ನಡೆಸಿದ್ದು ಗಗನಯಾನ ಕೈಗೊಳ್ಳಲಿರುವ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ.

ಕೇರಳ ಭೇಟಿಯಲ್ಲಿರುವ ನರೇಂದ್ರ ಮೋದಿ ಅವರು ತಿರುವನಂತಪುರಂನಲ್ಲಿರುವ ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾನ ಮಿಷನ್‌ನ ಪ್ರಗತಿ ಕುರಿತು ಪರಿಶೀಲನೆ ನಡೆಸಿ. ಮಿಷನ್‌ ಕುರಿತು ವಿಜ್ಞಾನಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಅವರು ಗಗನಯಾನ ಕೈಗೊಳ್ಳಲಿರುವ ಗಗನಯಾತ್ರಿಗಳ ಹೆಸರುಗಳನ್ನು ಪ್ರಕಟಿಸಿದರು. ಇದೇ ವೇಳೆ ಅವರು ಬಾಹ್ಯಾಕಾಶ ಕ್ಷೇತ್ರಗಳಿಗೆ ಸಂಬಂಧಿಸಿದ 1,800 ಕೋಟಿ ರೂ. ವೆಚ್ಚದ ಯೋಜನೆಗಳಿಗೂ ಚಾಲನೆ ನೀಡಿದರು.

ಇದನ್ನೂ ಓದಿ: ಅಡ್ಡ ಮತದಾನ: ನನ್ನ ಆತ್ಮ ಸಾಕ್ಷಿಯಂತೆ ಮತಹಾಕಿದ್ದೇನೆ: ಎಸ್.​ಟಿ ಸೋಮಶೇಖರ್​

ಪ್ರಶಾಂತ್‌ ಬಾಲಕೃಷ್ಣನ್‌ ನಾಯರ್‌, (ಗ್ರೂಪ್‌ ಕ್ಯಾಪ್ಟನ್‌)

ಅಜಿತ್‌ ಕೃಷ್ಣನ್‌,(ಗ್ರೂಪ್‌ ಕ್ಯಾಪ್ಟನ್‌),

ಅಂಗದ್‌ ಪ್ರತಾಪ್‌,(ಗ್ರೂಪ್‌ ಕ್ಯಾಪ್ಟನ್‌)

ಶುಭಾಂಶು ಶುಕ್ಲಾ, (ವಿಂಗ್‌ ಕಮಾಂಡರ್‌)

ಈ ನಾಲ್ವರೂ ಗಗನಯಾತ್ರಿಗಳಿಗೆ ವಿಂಗ್‌ಗಳನ್ನು ನೀಡಿದ ಪ್ರಧಾನಿ ಗೌರವ ಸೂಚಿಸಿ ಬಳಿಕ ಮಾತನಾಡಿದ ಮೋದಿ, “ಭಾರತವು ಈಗ ಎಲ್ಲ ಕ್ಷೇತ್ರಗಳಲ್ಲಿ ಐತಿಹಾಸಿಕ ಸಾಧನೆ ಮಾಡುತ್ತಿದೆ. ಈಗ ಮಾನವಸಹಿತ ಗಗನಯಾನಕ್ಕೆ ಇಸ್ರೋ ಅಣಿಯಾಗುತ್ತಿದೆ. ಈಗ ಸಮಯವೂ ನಮ್ಮದು, ಕೌಂಟ್‌ಡೌನ್‌ ಕೂಡ ನಮ್ಮದಾಗಿದೆ ಹಾಗೂ ರಾಕೆಟ್‌ ಕೂಡ ನಮ್ಮದಾಗಿದೆ. ಇದು ನವ ಭಾರತದ ಉದಯದ ಸಂಕೇತ” ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES