Saturday, June 15, 2024

ಸಿದ್ದರಾಮಯ್ಯ ಕೇಸ್ ಹಾಕಿದ ಕೂಡಲೇ ನನ್ನ ಆರೋಗ್ಯ ನೆಟ್ಟಗಾಯ್ತು : ಅನಂತ್ ಕುಮಾರ್ ಹೆಗಡೆ

ಬಾಗಲಕೋಟೆ : ಸಿದ್ದರಾಮಯ್ಯನವರು ನನ್ನ ಮೇಲೆ ಕೇಸ್ ಹಾಕಿದ ಕೂಡಲೇ ನನ್ನ ಆರೋಗ್ಯ ಕೂಡ ನೆಟ್ಟಗಾಯ್ತು ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಲೇವಡಿ ಮಾಡಿದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ನಡೆದ ಶ್ರೀ ರಾಮೋತ್ಸವ ಹಾಗೂ ಹಿಂದೂ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಸಿದ್ದರಾಮಯ್ಯನವರೇ, ನಿಮಗೆಷ್ಟು ತಾಕತ್ತಿದೆ ಕೇಸ್ ಹಾಕಲಿಕ್ಕೆ ಹಾಕಿ ಎಂದು ಸವಾಲ್ ಹಾಕಿದರು.

ಹಿಂದೂ ಸಮಾಜ ತನ್ನ ಜಾತಿ ವಿಷಬೀಜ ಮರೆತು ಒಂದಾಗಬೇಕು. ಯಾವ ಋಷಿಗಳು ಬ್ರಾಹ್ಮಣರಿರಲಿಲ್ಲ. ನಮ್ಮಲ್ಲಿ ಜಾತಿ ಇರಲಿಲ್ಲ, ಅವನ ಉದ್ಯೋಗದ ಮೇಲೆ ಗುರುತಿಸುತ್ತಿದ್ದರು. ಪೂಜೆ ಮಾಡುವ ದೇವರೆಲ್ಲ ಬ್ರಾಹ್ಮಣ ದೇವರಲ್ಲ. ಒಳ್ಳೆಯದು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನಮ್ಮಲ್ಲಿ ಬರಲಿ ಅಂತಿವಿ. ಹಿಂದೂ ರಾಷ್ಟ್ರದ ಮಾಡೋದು ನಮ್ಮ ಗುರಿ. ಈ ಮಾತನ್ನ ಅನಂತಕುಮಾರ್ ಹೆಗಡೆ ಅಲ್ಲದೇ, ಸಿದ್ದರಾಮಯ್ಯನವರು ಹೇಳೋಕಾಗುತ್ತಾ? ಎಂದು ಗುಡುಗಿದರು.

ನಮ್ಮ‌ ಗುರಿ ಹಿಂದೂ ರಾಷ್ಟ.. ಹಿಂದೂ ರಾಷ್ಟ್ರ..!

ಅತ್ಯಂತ ಅಮಷ್ಠಿಯ ಬದಕು ನಮ್ಮ ಹಿಂದೂ ರಾಷ್ಟ್ರದ ಕಲ್ಪನೆ. ಇವತ್ತು ನಾವು ಕೃಷಿ ಮಾಡೋದೆ ಮತ್ತೊಂದನ್ನು ಕೊಲ್ಲು ಅಂತ. ಮಣ್ಣಿನಲ್ಲಿರುವ ಸಾವಿರಾರು ಜೀವಿಗಳನ್ನು ಕೊಂದು ನಾವು ಬದುಕುತ್ತೇವೆ. ಕಳೆದ 10 ವರ್ಷಗಳಿಂದ ಜೀವ ಚೈತನ್ಯ ಕೃಷಿ ಆರಂಭವಾಗಿದೆ. ಹಿಂದೂ ಸಮಾಜ ಯಾರನ್ನೋ ಕಾಪಿ ಮಾಡಿ ಬದುಕಿದ ಸಮಾಜವಲ್ಲ. ವಿದೇಶಿಗರನ್ನು ಕಾಪಿ ಮಾಡಿ ನಾವು ದರಿದ್ರರಾದ್ವಿ. ನಮ್ಮ‌ ಗುರಿ ಹಿಂದೂ ರಾಷ್ಟ.. ಹಿಂದೂ ರಾಷ್ಟ್ರ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು.

RELATED ARTICLES

Related Articles

TRENDING ARTICLES