Monday, May 13, 2024

ರಾಮ ಭಕ್ತರಿಗೆ ಧಮ್ಕಿ ಹಾಕಿದವರನ್ನು ಒದ್ದು ಒಳಗೆ ಹಾಕಬೇಕು : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಅಯೋಧ್ಯೆ ಯಾತ್ರಿಕರು ಪ್ರಯಾಣಿಸುತ್ತಿದ್ದ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ, ಧಮ್ಕಿ ಹಾಕಿದ ಅನ್ಯಕೋಮಿನ ಯುವಕರನ್ನು ಒದ್ದು ಒಳಗೆ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ಫಲ ಎಂದು ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಮತ್ತು ತುಷ್ಟೀಕರಣದ ಕೆಲ ಪಕ್ಷಗಳು ಈ ರೀತಿ ಮಾಡುತ್ತಿವೆ. ವೋಟ್ ಬ್ಯಾಂಕ್​ಗಾಗಿ ಇಂತಹ ಘಟನೆಗಳಿಗೆ ಉತ್ತೇಜನವಾಗಿದೆ. ಯಾರಿಗೂ ಈ ರೀತಿಯ ಉತ್ತೇಜನ ಕೊಡಬಾರದು ಅನ್ನೋದು ನಮ್ಮ ಉದ್ದೇಶ. ಅಯೋಧ್ಯೆಗೆ ಹೋಗಿ ಬಂದರೆ ತಪ್ಪೇನು? ಎಂದು ಕಿಡಿಕಾರಿದ್ದಾರೆ.

ಕೆಲವರು ಮೆಕ್ಕಾ-ಮದೀನಾಗೂ ಹೋಗ್ತಾರೆ

ಕೆಲವರು ಮೆಕ್ಕಾ-ಮದೀನಾಗೂ ಹೋಗುತ್ತಾರೆ. ಈ ರೀತಿ ಧಮ್ಕಿ ಹಾಕಿದವರನ್ನು ಹಿಡಿದು ಒದ್ದು ಒಳಗೆ ಹಾಕಬೇಕು. ರಾಜ್ಯ ಸರ್ಕಾರ ಅಂಥವರ ಮೇಲೆ ಕಟ್ಟುಗಟ್ಟಿನ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಇರುವವರೆಗೂ ಏನು ಬೇಕಾದರೂ ಮಾಡಬಹುದು ಎನ್ನುವ ಧೈರ್ಯವಿದೆ ಅವರಿಗೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದು ಅತ್ಯಂತ ದುರ್ದೈವದ ಸಂಗತಿ

ಕೆಜೆ ಹಳ್ಳಿ, ಡಿಜೆ ಹಳ್ಳಿ ಅಂತ ಪ್ರಕರಣ ಮಾಡಬಹುದು ಎನ್ನುವ ಧೈರ್ಯವಿದೆ. ಹುಬ್ಬಳ್ಳಿ ಗಲಭೆ ಪ್ರಕರಣದ ಅಪರೂಪಿಗಳಿಗೂ ಪತ್ರ ಬರೆದು ಬಿಡುಗಡೆಗೊಳಿಸಿದರು. ಕಾಂಗ್ರೆಸ್ ಸರ್ಕಾರ ರುವುದರಿಂದ ಏನು ಬೇಕಾದರೂ ಮಾಡಬಹುದು ಎಂಬ ಮಾನಸಿಕತೆ ಬೆಳೆದಿದೆ. ಇದು ಅತ್ಯಂತ ದುರ್ದೈವದ ಸಂಗತಿ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES