Sunday, May 19, 2024

‘ತುಳು’ವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು : ಮೊಯ್ದೀನ್ ಬಾವಾ

ಬೆಂಗಳೂರು : ತುಳು ಭಾಷೆಯನ್ನು ರಾಜ್ಯದ ಅಧಿಕೃತ ಎರಡನೇ ಭಾಷೆಯಾಗಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದೇವೆ ಎಂದು ಮಾಜಿ ಕಾಂಗ್ರೆಸ್ ಶಾಸಕ ಮೊಯ್ದೀನ್ ಬಾವಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಳುವನ್ನು ಎಂಟನೇ ಪರಿಚ್ಛೇಧದಲ್ಲಿ ಸೇರಿಸಬೇಕು ಎಂದು ಅವಲತ್ತುಕೊಂಡಿದ್ದಾರೆ.

ಎರಡು ಕೋಟಿ ಜನರು ವ್ಯಾವಹಾರಿಕವಾಗಿ ತುಳು ಭಾಷೆ ಮಾತನಾಡುತ್ತಾರೆ. ದೇಶದ ನಾನಾ ಕಡೆ ತುಳು ಮಾತನಾಡುತ್ತಾರೆ. ತುಳು‌ ಲಿಪಿ ಸುಮಾರು 1,400 ವರ್ಷದ ಮುಂಚೆ ಬಂದಿದೆ. ಮಲಯಾಳಂ ಭಾಷೆ ತುಳುವಿನಿಂದ ಹುಟ್ಟಿರುವ ಭಾಷೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಅನೇಕರು ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ, ಸಿದ್ದರಾಮಯ್ಯರಿಗೆ ಬರೆದಿದ್ದೇವೆ

ರಾಜ್ಯ ಸರ್ಕಾರ ತುಳುವನ್ನು ರಾಜ್ಯದ ಅಧಿಕೃತವಾಗಿ ಎರಡನೇ ಭಾಷೆಯನ್ನಾಗಿ ಸೇರಿಸಬೇಕು. ಮುಂದೆ ಕೇಂದ್ರ ಸರ್ಕಾರ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು. ಈ ಸಂಬಂಧ 10 ಸಾವಿರ ಪತ್ರವನ್ನು ಸಿಎಂ ಸಿದ್ದರಾಮಯ್ಯರಿಗೆ, ಪ್ರಧಾನಿ ನರೇಂದ್ರ ಮೋದಿಗೆ ಬರೆದಿದ್ದೇವೆ ಎಂದು ಮೊಯ್ದೀನ್ ಬಾವಾ ಹೇಳಿದ್ದಾರೆ.

RELATED ARTICLES

Related Articles

TRENDING ARTICLES