Tuesday, May 21, 2024

ಕುಕ್ಕರ್, ಸೀರೆ, ಬಾಟಲಿ ಕೊಡೋದೇ ಅವರ ತಂತ್ರಗಾರಿಕೆ : ಸಿ.ಟಿ. ರವಿ

ಬೆಂಗಳೂರು : ಕುಕ್ಕರ್, ಸೀರೆ, ಬಾಟಲಿ ಕೊಡುವುದೇ ಅವರ ತಂತ್ರಗಾರಿಕೆ. ಅವರಿಗೆ ಕೆಲಸ ಮಾಡಿದ್ದೀನಿ ಎನ್ನುವ ವಿಶ್ವಾಸ ಇಲ್ಲ ಎಂದು ಸಂಸದ ಡಿ.ಕೆ. ಸುರೇಶ್​ಗೆ ಮಾಜಿ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರ ರಿಪಬ್ಲಿಕ್ ಅವರ ಕೆಲಸ ಮೊದಲಿಂದಲೇ ನಡೆಯುತ್ತಾ ಬಂದಿರೋದೇ ಇದು ಎಂದು ಕುಟುಕಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಎಂದು ಆರೋಪ ಮಾಡುತ್ತಿದ್ದಾರೆ. ಮನಮೋಹನ್ ಸಿಂಗ್ ಕಾಲದಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿತ್ತು? ನಂತರ ಪ್ರಧಾನಿ ನರೇಂದ್ರ ಮೋದಿ ಆಡಳಿತ ಬಂದ ಮೇಲೆ ನಮ್ಮ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ. ಈ ಬಗ್ಗೆ ಅಂಕಿ ಅಂಶಗಳನ್ನು ಸಿಎಂ ಸಿದ್ದರಾಮಯ್ಯ ತಿಳಿಸಲಿ ಎಂದು ಚಾಟಿ ಬೀಸಿದ್ದಾರೆ.

ಅವರು ಚುನಾವಣೆಗೆ ನಿಂತ್ರೆ ಒಳ್ಳೆಯದೇ

ಡಾ. ಮಂಜುನಾಥ್ ಲೋಕಸಭಾ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಡಾ. ಮಂಜುನಾಥ್ ಅವರು ಅವರ ಕಾರ್ಯಕ್ಷೇತ್ರದಲ್ಲಿ ಕೆಲಸ ‌ಮಾಡಿದ್ದಾರೆ. ನಾನು ಅಧಿಕಾರದಲ್ಲಿ ಇದ್ದಾಗ, ಇಲ್ಲದಾಗ ಯಾರಿಗಾದರೂ ಹೃದಯ ಸಂಬಂಧಿ ಕಾಯಿಲೆ ಇದ್ರೆ ಅವರಿಗೆ ಕರೆ ಮಾಡಿ ಕೇಳ್ತಿದ್ದೆ. ಅವರಂತವರು ಬಂದು ಚುನಾವಣೆಗೆ ನಿಂತ್ರೆ ಒಳ್ಳೆಯದೇ ಎಂದು ಹೇಳಿದ್ದಾರೆ.

ಚುನಾವಣೆ ನಿಂತ್ರೆ ನಾವು ಸೋಲಬಹುದು

ಜಯದೇವ ಆಸ್ಪತ್ರೆ ಅಕ್ರಮ ತನಿಖೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಕೆಲಸ ಎಲ್ಲರೂ ಮೆಚ್ಚಿದ್ದಾರೆ. ಎಲ್ಲಾ ಸರ್ಕಾರ ಬಂದಾಗ ಅವರನ್ನು ಮುಂದುವರೆಸಿದ್ದಾರೆ. ಇವರು ಚುನಾವಣೆ ನಿಂತ್ರೆ ನಾವು ಸೋಲಬಹುದು ಎನ್ನುವ ಅಳಕು ಇರಬಹುದು. ಹಾಗಾಗಿ, ತನಿಖೆ ಹಾದಿ ಹಿಡಿದಿರಬಹುದು ಎಂದು ಸಿ.ಟಿ. ರವಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES