Sunday, October 6, 2024

ಮೊದಲ ಪಂದ್ಯದಲ್ಲೇ ಬದ್ಧವೈರಿಗಳ ಕದನ : ಇಲ್ಲಿದೆ RCB ಮೊದಲ 5 ಪಂದ್ಯಗಳ ವೇಳಾಪಟ್ಟಿ

ಬೆಂಗಳೂರು : ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 17ನೇ ಆವೃತ್ತಿಯ ಐಪಿಎಲ್-2024 ವೇಳಾಪಟ್ಟಿ ಪ್ರಕಟವಾಗಿದೆ.

ಮಾರ್ಚ್ 22ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ಸ್​ ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಮೊದಲ ಪಂದ್ಯದಿಂದ ಐಪಿಎಲ್ ಹಂಗಾಮ ಶುರುವಾಗಲಿದೆ.

ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬದ್ಧವೈರಿಗಳಾದ ಬೆಂಗಳೂರು (RCB) ಹಾಗೂ ಚೆನ್ನೈ (CSK) ಸೆಣಸಲಿವೆ. ಈ ಮೂಲಕ ಮೊದಲ ಪಂದ್ಯದಲ್ಲೇ ಐಪಿಎಲ್ ಕ್ರೇಜ್​ ತಾರಕಕ್ಕೇರಲಿದೆ.

ಮೊದಲ ಸುತ್ತಿನ 21 ಪಂದ್ಯಗಳಲ್ಲಿ ಆರ್​ಸಿಬಿ ಮಾತ್ರ 5 ಪಂದ್ಯಗಳನ್ನು ಆಡುವ ಏಕೈಕ ತಂಡವಾಗಿದೆ. ಈ ಪೈಕಿ ಆರ್​ಸಿಬಿ ಬೆಂಗಳೂರಿನಲ್ಲಿ 3 ಪಂದ್ಯ ಆಡಲಿದೆ. ಇನ್ನೂ ಚೆನ್ನೈ ಹಾಗೂ ಆರ್​ಸಿಬಿ ತಂಡಗಳು ಈವರೆಗೆ 30 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ 20 ಬಾರಿ ಗೆಲುವಿನ ನಗೆ ಬೀರಿದ್ದರೆ, ಆರ್​ಸಿಬಿ 10 ಬಾರಿ ಗೆಲುವು ಸಾಧಿಸಿದೆ.

ಆರ್​ಸಿಬಿಯ ಮೊದಲ 5 ಪಂದ್ಯಗಳು

  • ಮಾರ್ಚ್​ 22 : ಆರ್​ಸಿಬಿ vs ಚೆನ್ನೈ, ಚೆನ್ನೈ
  • ಮಾರ್ಚ್​ 25 : ಆರ್​ಸಿಬಿ vs ಪಂಜಾಬ್, ಬೆಂಗಳೂರು
  • ಮಾರ್ಚ್ 29 : ಆರ್​ಸಿಬಿ vs ಕೆಕೆಆರ್, ಬೆಂಗಳೂರು
  • ಏಪ್ರಿಲ್ 2 : ಆರ್​ಸಿಬಿ vs ಎಲ್​ಎಸ್​ಜಿ, ಬೆಂಗಳೂರು
  • ಏಪ್ರಿಲ್ 6 : ಆರ್​ಸಿಬಿ vs ಆರ್​ಆರ್, ಜೈಪುರ

RELATED ARTICLES

Related Articles

TRENDING ARTICLES