Tuesday, January 21, 2025

ಕುಮಟಾ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆ: ಗೂಢಚರ್ಯೆ ಅನುಮಾನ!

ಕಾರವಾರ: ಭಾರತೀಯ ಜಲ ಪ್ರದೇಶದಲ್ಲಿ ಚೀನಾ ಪತ್ತೆಯಾದ ಮಾಹಿತಿ ಲಭಿಸಿದ್ದು, ಕರಾವಳಿ ಕಾವಲು ಪಡೆಯ ಪೊಲೀಸರು ಅಲರ್ಟ್ ಆಗಿದ್ದಾರೆ. ಕುಮಟಾ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆಯಾಗಿದ್ದು, ಕಾರವಾರ ಸೀಬರ್ಡ್ ನೌಕಾನೆಲೆಯ ಬಗ್ಗೆ ಗೂಢಚಾರಿಕೆ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದೆ.

ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಪೊಲೀಸ್ ಪಡೆಯಿಂದ ತನಿಖೆ ನಡೆಯುತ್ತಿದ್ದು, ಕುಮಟಾದಿಂದ ತೆರಳಿದ್ದ ಬೋಟಿನಲ್ಲಿದ್ದ ಮೀನುಗಾರರಿಂದ ಚೀನಾ ಬೋಟ್ ಬಗೆಗಿನ ಮಾಹಿತಿ ಸಿಕ್ಕಿದೆ. ಚೀನಾದ ಪುಝುವಾ ಬಂದರಿನಲ್ಲಿ ನೋಂದಣಿಯಾಗಿರುವ ಬೋಟ್ ಇದಾಗಿದ್ದು, ಕರಾವಳಿ ಪೊಲೀಸ್ ಪಡೆಯ ಕುಮಟಾ ಠಾಣೆ ಇನ್ಸ್ ಪೆಕ್ಟರ್ ವಿಕ್ಟರ್ ನೈಮನ್ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕಾಂಡೋಮ್‌ ಪ್ಯಾಕ್‌ಗಳಲ್ಲಿ ರಾಜಕೀಯ ಪಕ್ಷಗಳ ಹೆಸರು: ವೀಡಿಯೋ ವೈರಲ್​!

ಈ ಕುರಿತು ಇನ್ಸ್ ಪೆಕ್ಟರ್ ವಿಕ್ಟರ್ ನೈಮನ್ ನೇತೃತ್ವದ ಸಿ ಎಸ್ ಪಿ ಪೊಲೀಸರ ತಂಡ ಮೀನುಗಾರರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕುಮಟಾದಿಂದ ಹೊರಟ ಮೀನುಗಾರಿಕಾ ಬೋಟ್ ಸಿಬಂದಿಯೋರ್ವರು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ರಾಜ್ಯದ ಕರಾವಳಿಯ ಮೀನುಗಾರರು ಚೀನಾ ಬೋಟ್ ನ ವಿಡಿಯೋ ಸೆರೆಹಿಡಿದಿದ್ದು, ಭಾರತೀಯ ಸೇನೆ ಕಣ್ಣು ತಪ್ಪಿಸಿ ಚೀನಾ ಬೋಟ್ ಗಡಿ ಪ್ರವೇಶ ಮಾಡಿದ್ದು, ಗೂಢಚರ್ಯೆ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಕೋಸ್ಟ್ ಗಾರ್ಡ್ ಹೈಎಲರ್ಟ್ ಆಗಿದೆ.

RELATED ARTICLES

Related Articles

TRENDING ARTICLES