Sunday, December 15, 2024

ಕಾಂಡೋಮ್‌ ಪ್ಯಾಕ್‌ಗಳಲ್ಲಿ ರಾಜಕೀಯ ಪಕ್ಷಗಳ ಹೆಸರು: ವೀಡಿಯೋ ವೈರಲ್​!

ಆಂಧ್ರ: ಲೋಕಸಭಾ ಚುನಾವಣೆಯ ಹೊತ್ತಲ್ಲೇ ಕಾಂಡೋಮ್‌ ಸದ್ದು ಮಾಡುತ್ತಿದ್ದು, ಆಂಧ್ರಪ್ರದೇಶದಲ್ಲಿ ಇವುಗಳು ಚುನಾವಣಾ ಪ್ರಚಾರದ ಸಾಧನವಾಗಿ ಮಾರ್ಪಟ್ಟಿವೆ. ಎರಡು ಪಕ್ಷಗಳ ಹೆಸರಿನಲ್ಲಿ ಕಾಂಡೋಮ್‌ ಪ್ಯಾಕ್‌ಗಳು ಮಾರಾಟವಾಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ದರ್ಶನ್ ವಿರುದ್ಧ ಒಕ್ಕಲಿಗ ಗೌಡ್ತಿಯರಿಂದ ಮಹಿಳಾ ಆಯೋಗಕ್ಕೆ ದೂರು!

YSR ಕಾಂಗ್ರೆಸ್ ಪಕ್ಷ ಮತ್ತು ತೆಲುಗು ದೇಶಂ ಪಾರ್ಟಿ ಪಕ್ಷದ ಕಾರ್ಯಕರ್ತರು ಮತದಾರರಿಗೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಡೋಮ್‌ಗಳನ್ನು ಸಾರ್ವಜನಿಕರಿಗೆ ಹಂಚಲಾಗುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬ ಕಾಂಡೋಮ್‌ಗಳನ್ನು ಏಕೆ ವಿತರಿಸಲಾಗುತ್ತಿದೆ ಎಂದು ಟಿಡಿಪಿ ಕಾರ್ಯಕರ್ತ ಎಂದು ಹೇಳಲಾದ ವ್ಯಕ್ತಿಯನ್ನು ಕೇಳಿದಾಗ, ಹೆಚ್ಚು ಮಕ್ಕಳಿದ್ದರೆ, ಹೆಚ್ಚಿನ ಹಣವನ್ನು ವಿತರಿಸಬೇಕು. ಅದಕ್ಕಾಗಿಯೇ ಈ ಕಾಂಡೋಮ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಉತ್ತರಿಸಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.

 

RELATED ARTICLES

Related Articles

TRENDING ARTICLES