Wednesday, January 22, 2025

ಸಚಿನ್ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫುಲ್ ಫಿದಾ!

ಟೀಂ ಇಂಡಿಯಾದ ದಿಗ್ಗಜ ಸಚಿನ್​ ತೆಂಡುಲ್ಕರ್​ ಗಾಗಿ ಇಡೀ ವಿಮಾನವೇ ಮಿನಿ ಸ್ಟೇಡಿಯಂ ರೀತಿ ಬದಲಾದ ಘಟನೆ ನಡೆದಿದೆ. ವಿಮಾನದಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್​ ರನ್ನು ಕಂಡ ಅಭಿಮಾನಿಗಳು ಸಚಿನ್ ಸಚಿನ್​ ಎಂದು ಘೋಷಣೆ ಕೂಗುವ ಮೂಲಕ ಅಭಿಮಾನವನ್ನು ಮೆರೆದಿದ್ದಾರೆ.

ಕ್ರಿಕೆಟ್​ ಲೋಕದ ದಂತಕಥೆ ಸಚಿನ್, ಸಾಮಾನ್ಯನಂತೆ ಎಕಾನಮಿ ಕ್ಲಾಸ್​ ವಿಮಾನದಲ್ಲಿ ಪ್ರಯಾಣ ಮಾಡುವುದನ್ನು ಕಂಡು, ಈತನ ನಿರಾಡಂಭರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ದಿಲ್ ಖುಷ್​ ಆಗಿದ್ದಾರೆ. ಸಚಿನ್​ ಕೂಡ ತನ್ನನ್ನು ವಿಶ್​ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಜಿಲ್ಲಾ ನ್ಯಾಯಾಲಯದಲ್ಲಿ ಬೆರಳಚ್ಚುಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಚಿನ್ ತೆಂಡುಲ್ಕರ್​ ಸದ್ಯ ಟ್ರಾವೆಲಿಂಗ್ ಮೂಡ್​ನಲ್ಲಿದ್ದು ಎಕಾನಮಿ ಕ್ಲಾಸ್​ ವಿಮಾನದಲ್ಲಿ ಇಡಿ ಕುಟುಂಬ ಸಮೇತ ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಟೊಗಳನ್ನು ಸಚಿನ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಳ್ಳುವ ಮೂಲಕ ದೃಢಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES