Wednesday, January 22, 2025

ನಾದಿನಿ ಲವ್ವಿ ಡವ್ವಿ.. ಪಿತ್ತ ನೆತ್ತಿಗೇರಿ ಮಸಣಕ್ಕೆ ಕಳುಹಿಸಿದ ಪತಿ

ಬೆಂಗಳೂರು : ಅವರಿಬ್ಬರು ಒಂದೇ ಮನೆಯಲ್ಲಿ ಅಕ್ಕ, ತಂಗಿಯನ್ನು ಮದುವೆಯಾಗಿ ಒಟ್ಟಿಗೆ ವಾಸವಾಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಮ್ಯೂಚುವಲ್ ಅಂಡರ್ ಸ್ಟ್ಯಾಂಟ್ ಎನ್ನುವಂತೆ ಅಕ್ರಮ ಸಂಬಂಧ ಬೆಳೆದಿತ್ತು. ಶಡ್ಕನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದವನಿಗೆ ಮುಹೂರ್ತವೂ ಫಿಕ್ಸ್ ಆಗಿತ್ತು. ಅದ್ಯಾವ ಮುಹೂರ್ತ ಅಂದ್ರೆ ಈ ಸ್ಟೋರಿ ಓದಿ ಗೊತ್ತಾಗುತ್ತೆ.

ಈ ಫೋಟೋದಲ್ಲಿ ಕಾಣ್ತಿರೋ ವ್ಯಕ್ತಿಯ ಹೆಸರು ಮಹಮದ್ ಅಖ್ತರ್ ಅಲಿ(49). ಈತ ಮೂಲತಃ ಪಶ್ಚಿಮ ಬಂಗಾಳದವನು. ಚಿನ್ನಾಭರಣ ತಯಾರು ಮಾಡುತ್ತಿದ್ದ ಈತ ಕಳೆದ 26 ವರ್ಷದಿಂದಲೂ ಕಬ್ಬನ್ ಪೇಟೆಯ ಜುಮ್ಮಮಸೀದಿ ಬಳಿ ವಾಸವಾಗಿದ್ದ. ಮಹಮದ್ ಅಖ್ತರ್ ಅಲಿ ಪತ್ನಿ ಮಕ್ಕಳು ಮತ್ತು ನಾದಿನಿ ಆಕೆಯ ಪತಿ ಶಹನವಾಜ್ ಎಲ್ಲರೂ ಒಟ್ಟಿಗೆ ವಾಸವಾಗಿದ್ದರು.

ಮಹಮದ್ ಅಖ್ತರ್ ಅಲಿ ಪತ್ನಿಯ ತಂಗಿ ಅಂದರೆ ನಾದನಿಯ ಮೇಲೆಯೇ ಕಣ್ಣಾಕಿದ್ದ. ಅಕ್ಕ ಅಕ್ಕಪಕ್ಕ ಕಡೆಗೆ ಹೋದಾಗ ನಾದಿನಿಯನ್ನು ತನ್ನ ಪಕ್ಕಕ್ಕೆ ಸೆಳೆಯುತ್ತಿದ್ದನಂತೆ. ಈ ವಿಚಾರ ಶಹನವಾಜ್​ಗೆ ಗೊತ್ತಾಗಿ ಜಗಳವೂ ಆಗಿದೆ. ಇದಾದ ಬಳಿಕ ಮಹಮದ್ ಅಖ್ತರ್ ಅಲಿ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗಲೇ ಇಲ್ಲ.

ಅಮಾಯಕನಂತೆ ಫೋಸ್ ನೀಡಿದ ಶಹನವಾಜ್

ಅಂದಹಾಗೆ ಮಹಮದ್ ಅಖ್ತರ್ ಖಾನ್ ನನ್ನು ಶಡ್ಕ ಶಹನವಾಜ್ ಅಂಡ್ ಪಟಾಲಂ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೆ ಸಿನಿಮೀಯ ಶೈಲಿಯಲ್ಲಿ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಆ ಬಳಿಕ ಶವವನ್ನು ಹೊಸಕೋಟೆ ಸಮೀಪದ ರಾಜಕಾಲುವೆ ಬಳಿ ಎಸೆದು ಬಂದಿದ್ದಾರೆ. ಈ ವೇಳೆ ಅಖ್ತರ್ ಖಾನ್ ಪತ್ನಿ ಹುಸೈನಾ ಬಿಬಿ ಹಲಸೂರುಗೇಟ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಲು ಬಂದಾಗ ಶಹನವಾಜ್ ಸಹ ಜೊತೆಯಲ್ಲೇ ಬಂದು ಅಮಾಯಕನಂತೆ ಫೋಸ್ ನೀಡಿದ್ದಾನೆ. ಆದರೆ, ಮೃತನ ಮೊಬೈಲ್ ಶಹನವಾಜ್ ಕಾರಿನಲ್ಲೇ ರಿಂಗಣಿಸುತ್ತಿರುತ್ತೆ ಜೊತೆಗೆ ಕಾರಿನಲ್ಲಿದ್ದ ರಕ್ತದ ಕಲೆ ಸಾವಿನ ಸುಳಿವು ನೀಡುತ್ತೆ.

ಅಕ್ಕ ತಂಗಿಯರ ಬಾಳಿಗೆ ಮುಳ್ಳಾದ ಲವ್ವಿ ಡವ್ವಿ

ಸದ್ಯ ಹಲಸೂರು ಗೇಟ್ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದು ಕೊಲೆಯ ವಿಚಾರ ಬಹಿರಂಗವಾಗಿದೆ. ಈಗಾಗಲೇ ಆರೋಪಿ ಶಹನವಾಜ್ ವಶಕ್ಕೆ ಪಡೆದಿರೋ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಅದೇನಾದ್ರು ಅಕ್ರಮ ಸಂಬಂಧ ಅಕ್ಕ ತಂಗಿಯರ ಬಾಳಿಗೆ ಮುಳ್ಳಾದ್ರೆ, ಶಡ್ಕರ ಬಾಳಲ್ಲಿ ಒಬ್ಬ ಕೊಲೆಯಾಗಿದ್ರೆ ಮತ್ತೊಬ್ಬ ಜೈಲು ಸೇರಿದ್ದಾನೆ.

RELATED ARTICLES

Related Articles

TRENDING ARTICLES