Thursday, December 19, 2024

ಹವಾ ಮಲ್ಲಿನಾಥ್ ಸ್ವಾಮೀಜಿಯ ಬಂಧನ!

ಕಲಬುರಗಿ: ಜೈ ಭಾರತ್ ಮಾತಾ ಸೇವಾ ಸಮಿತಿಯ ಹವಾ ಮಲ್ಲಿನಾಥ್ ಸ್ವಾಮೀಜಿ ಅಟ್ರಾಸಿಟಿ ಕೇಸ್‌ನಲ್ಲಿ ಕಲಬುರಗಿ ಎಂ.ಬಿ ನಗರ ಪೊಲೀಸರು ಬಂಧಿಸಿದ್ದಾರೆ.

ಅಟ್ರಾಸಿಟಿ ಕೇಸ್ ಸಂಬಂಧ ಹವಾ ಮಲ್ಲಿನಾಥ್ ಸ್ಚಾಮೀಜಿ ನ್ಯಾಯಲಯಕ್ಕೆ ಹಾಜಾರಾಗಿಲ್ಲ. ಈ ಹಿನ್ನೆಲೆ ಕಲಬುರಗಿಯ ಎರಡನೇ ಹೆಚ್ಚುವರಿ ನ್ಯಾಯಲಯದಿಂದ ಸ್ವಾಮೀಜಿಗೆ ವಾರೆಂಟ್ ಜಾರಿ ಮಾಡಿದ್ದು, ನ್ಯಾಯಾಲಯದ ಮುಂದೆ ಹವಾ ಮಲ್ಲಿನಾಥ್ ಸ್ವಾಮೀಜಿ ಶರಣಾಗಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್ ವಿರುದ್ದ ಪ್ರಕರಣ ದಾಖಲಿಸಿದ ED

2017 ರಲ್ಲಿ ಮಹಾನಂದ ಪ್ರಕಾಶ್ ಸ್ವಾಮೀಜಿ ಎಂಬುವವರ ಮದುವೆಯಾಗಿತ್ತು. ಪ್ರಕಾಶ್ ಮದುವೆಯಾದ ಬಳಿಕ ಯುವತಿಗೆ ವಂಚನೆ ಮಾಡಿದ್ದ. ವಂಚನೆ ಹಿನ್ನಲೆ ಪ್ರಕಾಶ್ ಸ್ವಾಮೀಜಿ , ಹವಾ ಮಲ್ಲಿನಾಥ್ ಸ್ವಾಮೀಜಿ ಮೇಲೆ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ನ್ಯಾಯಲಯದ ಮುಂದೆ ಹವಾ ಮಲ್ಲಿನಾಥ್ ಸ್ವಾಮೀಜಿ ಹಾಜಾರಾಗಿರಲಿಲ್ಲ. ಇಂದು ಕೋರ್ಟ್ ಮುಂದೆ ಹಾಜಾರಾಗಿದ್ದ ಹಿನ್ನಲೆ ಹವಾ ಮಲ್ಲಿನಾಥ್ ಸ್ವಾಮೀಜಿಯನ್ನು ಕೋರ್ಟ್​​​​​​​​​ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

RELATED ARTICLES

Related Articles

TRENDING ARTICLES