Tuesday, October 15, 2024

ಮೋದಿ ಮತ್ತೆ ಪ್ರಧಾನಿ ಆಗ್ತಾರೆ, ಹಿಂದೂ ರಾಷ್ಟ್ರ ಮಾಡ್ತಾರೆ : ಪ್ರಮೋದ್ ಮುತಾಲಿಕ್

ದಾವಣಗೆರೆ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ನಿಶ್ಚಿತವಾಗಿ ಗೆಲ್ಲುತ್ತೇವೆ. ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಆಗ್ತಾರೆ. ಹಿಂದೂ ರಾಷ್ಟ್ರ ಘೋಷಣೆ ಮಾಡ್ತಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಒಂದು ರಾಮ ಮಂದಿರ ನಿರ್ಮಾಣ ಆಗಿದೆ. ಆ ಮೂಲಕ ಶ್ರೀರಾಮ ಜಗತ್ತಿನ ಎಲ್ಲರ ಹೃದಯದಲ್ಲಿ ಇದ್ದಾನೆ ಎಂದು ತಿಳಿಸಿದರು.

ಮಳಲಿ ಮಸೀದಿ ವಿಚಾರ ಕುರಿತು ಮಾತನಾಡಿದ ಅವರು, ಮಳಲಿ ಮಸೀದಿ ಅಷ್ಟೇ ಅಲ್ಲ, ಶ್ರೀರಂಗಪಟ್ಟಣದ ಪಡುವಣ ಆಂಜನೇಯ ದೇವಸ್ಥಾನ ಸೇರಿದಂತೆ ಅನೇಕ ಮಸೀದಿಯ ಕೆಳಗೆ ಹಿಂದೂ ದೇವರುಗಳು ಇದ್ದಾವೆ. ಈ ಹಿನ್ನೆಲೆಯಲ್ಲಿ ಮಳಲಿಯಲ್ಲಿ ಮಸೀದಿ ಕಟ್ಟುವಾಗ ದೇವಸ್ಥಾನ ಸಿಕ್ಕಿರೋದು ಎಂದು ಹೇಳಿದರು.

ಸೌಹಾರ್ದತೆಯಿಂದ ದೇವಸ್ಥಾನ ಬಿಟ್ಟು ಕೊಡಲಿ

ಮುಸ್ಲಿಮರು ಸೌಹಾರ್ದದಿಂದ ಮಳಲಿ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು. ಇಲ್ಲದಿದ್ದರೆ ಸಂಘರ್ಷ, ದ್ವೇಷ ನಿರ್ಮಾಣ ಆಗುತ್ತದೆ. ಸೌಹಾರ್ದತೆಯಿಂದ ದೇವಸ್ಥಾನ ಬಿಟ್ಟು ಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.

RELATED ARTICLES

Related Articles

TRENDING ARTICLES