Sunday, February 25, 2024

ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹ ಪ್ರಕರಣ: ಇಂದು ಸುಂಪ್ರಿ ಕೋರ್ಟ್​ನಲ್ಲಿ ವಿಚಾರಣೆ !

ಹೊಸದಿಲ್ಲಿ: ಪ್ರಜ್ವಲ್​ ರೇವಣ್ಣ ಅವರ ಸಂಸದ ಸ್ಥಾನ ಅನರ್ಹಗೊಳಿಸಿ ರಾಜ್ಯ ಹೈಕೋರ್ಟ್​ ನೀಡಿದ್ದ ಆದೇಶದ ವಿರುದ್ದ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಇಂದು ನಡೆಯಲಿದೆ.

ಈ ಹಿಂದೆ ರಾಜ್ಯ ಹೈಕೋರ್ಟ್‌ ಪ್ರಜ್ವಲ್‌ ರೇವಣ್ಣ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದು, ಈ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಸದ್ಯ ಈ ಪ್ರಕರಣವು ನ್ಯಾ.ಸೂರ್ಯಕಾಂತ್‌ ಅವರ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ‘ದಿಲ್ಲಿ ಚಲೋ’ ಹೋರಾಟ; ದೆಹಲಿಯಲ್ಲಿ 1 ತಿಂಗಳು ನಿಷೇಧಾಜ್ಞೆ!

2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸಲ್ಲಿಸಲಾದ ತಮ್ಮ ಅಫಿಡವಿಟ್‌ನಲ್ಲಿ ಸುಳ್ಳು ದಾಖಲೆ ಸಲ್ಲಿಸಿದ, ಹಾಗೂ ಚುನಾವಣಾ ಅಕ್ರಮಗಳ ಆರೋಪದ ಮೇಲೆ ಜನತಾ ದಳ (ಜಾತ್ಯತೀತ) ನಾಯಕ ಪ್ರಜ್ವಲ್ ರೇವಣ್ಣ ಅವರನ್ನು ಕರ್ನಾಟಕ ಹೈಕೋರ್ಟ್ ಹಾಸನ ಜಿಲ್ಲೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್​ ನ ಏಕ ಪೀಠದ ನ್ಯಾಯಾಧೀಶ ಕೆ.ನಟರಾಜನ್ ಅವರು ಈ ತೀರ್ಪು ನೀಡಿದ್ದರು.

ಕ್ಷೇತ್ರದ ಮತದಾರರಾದ ಎ. ಮಂಜು ಮತ್ತು ಜಿ. ದೇವರಾಜೇಗೌಡ ಎಂಬವರು ಸಲ್ಲಿಸಿದ್ದ ಅರ್ಜಿಗಳನ್ನು ಆಧರಿಸಿ ಅನರ್ಹತೆ ತೀರ್ಪು ನೀಡಲಾಗಿತ್ತು. ಮಂಜು ಮಾಜಿ ಬಿಜೆಪಿ ಅಭ್ಯರ್ಥಿಯಾಗಿದ್ದು, 2019ರ ಚುನಾವಣೆಯಲ್ಲಿ ರೇವಣ್ಣ ವಿರುದ್ಧ ಸೋತಿದ್ದರು. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲು, ಮಂಜು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು.

RELATED ARTICLES

Related Articles

TRENDING ARTICLES