Wednesday, January 22, 2025

ಟಿಕೆಟ್​ ರಹಿತ ಪ್ರಯಾಣಿಕರಿಂದ ಭಾರಿ ದಂಡ ವಸೂಲಿ!

ಬೆಂಗಳೂರು: ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಟಿಕೆಟ್​ ತಪಾಸಣಾ ಕಾರ್ಯ ನಡೆಸಿದ ಅಧಿಕಾರಿಗಳು ಟಿಕೆಟ್ ಪಡೆಯದೇ ಪ್ರಯಾಣಿಸಿದವರಿಂದ ಭಾರಿ ದಂಡವನ್ನು ವಸೂಲಿ ಮಾಡುವ ಮೂಲಕ ಪ್ರಯಾಣಿಕರಿಗೆ ಚುರುಕು ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹ ಪ್ರಕರಣ: ಇಂದು ಸುಂಪ್ರಿ ಕೋರ್ಟ್​ನಲ್ಲಿ ವಿಚಾರಣೆ !

2024ರ ಜನವರಿ ತಿಂಗಳಿನಲ್ಲಿ ಕೆಎಸ್​ಆರ್​ಟಿಸಿ ವ್ಯಾಪ್ತಿಗೆ ಬರುವ ಒಟ್ಟು 44521 ಬಸ್​ಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿ 3712 ಟಿಕೆಟ್​ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದಾರೆ, ಇವರಿಂದ ಒಟ್ಟು 5,71,296 ರೂಗಳ ಭಾರಿ ದಂಡವನ್ನು ವಸೂಲಿ ಮಾಡಿದ್ದಾರೆ.

ಇನ್ನೂ, ನಿಗಮದ ಆದಾಯ ಸೋರಿಕೆ ಬಗ್ಗೆ ತನಿಖೆ ಕೈಗೊಂಡ ತನಿಖಾಧಿಕಾರಿಗಳ ತಂಡವು ತಪಾಸಣೆ ನಡೆಸಿ ನಿಗಮಕ್ಕೆ 81,853 ಸಾವಿರ ರೂಪಾಯಿ ಆದಾಯ ಸೋರಿಕೆ ಆಗಿರೋದು ಪತ್ತೆ ಹಚ್ಚಿದೆ. ಅಕ್ರಮ ಎಸಗಿದ ತಪ್ಪಿತಸ್ತರ ವಿರುದ್ದ ನಿಗಮದ ಕಾನೂನುಗಳ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಸ್ಫಷ್ಟಪಡಿಸಿದೆ.

RELATED ARTICLES

Related Articles

TRENDING ARTICLES