Sunday, February 25, 2024

ICC Under-19 Worldcup: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ

ಬೆನೊನಿ: ಐಸಿಸಿ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತವನ್ನು ಎದುರಿಸಲಿರುವ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತಕ್ಕೊಳಗಾಗಿದೆ. ರಾಜ್​ಲಿಂಬಾನಿ ಬೌಲಿಂಗ್​ನಲ್ಲಿ ಸ್ಯಾಮ್ ಕಾನ್ಸ್ಟಾಸ್ ಔಟಾಗಿದ್ದಾರೆ.

ಇದನ್ನೂ ಓದಿ: ಈಶ್ವರಪ್ಪ ಗುಂಡಿಕ್ಕಿ ಹೇಳಿಕೆಯನ್ನ ಸಮರ್ಥಿಸಿಕೊಂಡ ಪ್ರಮೋದ್ ಮುತಾಲಿಕ್!

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್​ 19 ಫೈನಲ್​ ಪಂದ್ಯ ನಡೆಯುತ್ತೆದೆ. ಉದಯ್ ಸಹರಣ್ ನೇತೃತ್ವದ ಭಾರತ ತಂಡವು ಆಡಿರುವ ಎಲ್ಲ ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿ ಫೈನಲ್ ತಲುಪಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಅಂತೆಯೇ ಸೆಮಿಫೈನಲ್ ನಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು ವಿರೋಚಿತವಾಗಿ ಮಣಿಸಿರುವ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಆಗಿದೆ.

ತಂಡಗಳು :


ಭಾರತ: 
ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರನ್ (ನಾಯಕ), ಪ್ರಿಯಾಂಶು ಮೊಲಿಯಾ, ಸಚಿನ್ ದಾಸ್, ಅರವೆಲ್ಲಿ ಅವನೀಶ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮಿ ಪಾಂಡೆ.

ಆಸ್ಟ್ರೇಲಿಯಾ: ಹ್ಯಾರಿ ಡಿಕ್ಸನ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೀಬ್ಜೆನ್ (ನಾಯಕ), ಹರ್ಜಸ್ ಸಿಂಗ್, ರಯಾನ್ ಹಿಕ್ಸ್ (ವಿಕೆಟ್ ಕೀಪರ್), ಆಲಿವರ್ ಪೀಕ್, ಚಾರ್ಲಿ ಆಂಡರ್ಸನ್, ರಾಫ್ ಮ್ಯಾಕ್‌ಮಿಲನ್, ಟಾಮ್ ಸ್ಟ್ರಾಕರ್, ಮಾಹ್ಲಿ ಬಿಯರ್ಡ್‌ಮ್ಯಾನ್, ಕ್ಯಾಲಮ್ ವಿಡ್ಲರ್

RELATED ARTICLES

Related Articles

TRENDING ARTICLES