Wednesday, January 22, 2025

ಖಾಸಾಗಿ ಶಾಲೆ ಬಸ್​​​​ಗೆ ಟ್ಯಾಂಕರ್ ಡಿಕ್ಕಿ!: ಶಾಲಾ ಮಕ್ಕಳಿಗೆ ಗಾಯ

ಮೈಸೂರು: ಖಾಸಗಿ ಶಾಲೆ ಬಸ್​​​​ಗೆ ಟ್ಯಾಂಕರ್ ಡಿಕ್ಕಿಯಾಗಿ ಸಿಇಟಿ ಖಾಸಗಿ ಶಾಲೆಗೆ ಸೇರಿದ ಮಿನಿ ಬಸ್​​ ಉರುಳಿ ಬಿದ್ದಿರುವ ಘಟನೆ ಜಿಲ್ಲೆಯ ಸಾಲಿಗ್ರಾಮ-ಭೇರ್ಯ ಹೆದ್ದಾರಿಯ ಕುರುಬಹಳ್ಳಿ ಗೇಟ್ ಬಳಿ ನಡೆದಿದೆ.

ಇದನ್ನೂ ಓದಿ: ಕಾಟೇರ ಸಕ್ಸಸ್​ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್!

ಮಿನಿ ಬಸ್ಸ್ ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನ ರವಾನೆ ಮಾಡಲಾಗಿದೆ. ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ಟ್ಯಾಂಕರ್ ತೆರಳುತ್ತಿದ್ದು, ಇದೇ ಮಾರ್ಗವಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಮಿರ್ಲೆ ಗ್ರಾಮಕ್ಕೆ ಹೋಗುತ್ತಿದ್ದ ಮಿನಿ ಬಸ್ಸ್​​​ಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES