Tuesday, October 15, 2024

ಕಾಟೇರ ಸಕ್ಸಸ್​ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್!

ಕಾಟೇರ ಸಿನಿಮಾ ಸಕ್ಸಸ್​ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರು ಇಂದು ತಿರುಪಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ತಮ್ಮ ಆಪ್ತರೊಂದಿಗೆ ತಿರುಪತಿಗೆ ಭೇಟಿ ನಿಡಿರುವ ದರ್ಶನ್, ಈ ಹಿಂದೆ ಕ್ರಾಂತಿ ಚಿತ್ರದ ಪ್ರಚಾರಕ್ಕೆ ಮೊದಲು ಕೂಡ ಸಚ್ಚಿದಾನಂದ ಹಾಗೂ ಎಂಎಲ್‌ಎ ಸತೀಶ್ ರೆಡ್ಡಿ ಜೊತೆ ತಿರುಪತಿ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದರು. ರಾಬರ್ಟ್ ಚಿತ್ರದ ಬಿಡುಗಡೆಯ ಸಮಯದಲ್ಲೂ ತಮ್ಮ ಅತ್ಯಾಪ್ತರ ಜೊತೆ ದರ್ಶನ್ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದರು. ಈಗ ಕಾಟೇರ ಚಿತ್ರದ ಅದ್ಭುತ ಹಾಗೂ ಅದ್ವೀತಿಯ ಯಶಸ್ಸಿನ ನಂತರ ದರ್ಶನ್ ಭೂಲೋಕದ ವೈಕುಂಟವೆಂದು ಕರೆಯಲ್ಪಡುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: 40% ಭ್ರಷ್ಟಾಚಾರ : ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು-ಎಎಪಿ

ಕಾಟೇರ ಬಳಿಕ ಬಹುನಿರೀಕ್ಷಿತ ಡೆವಿಲ್ ಚಿತ್ರದ ಪ್ರಾರಂಭಕ್ಕೂ ಮುನ್ನ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಕೆಲ ತಿಂಗಳ ಹಿಂದೆ ‘ಡೆವಿಲ್’ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಸದ್ದಿಲ್ಲದೆ ಈ ಸಿನಿಮಾ ಕೆಲಸಗಳು ಆರಂಭ ಆಗಿವೆ. ಈ ಮೊದಲು ಸಿನಿಮಾದ ಫಸ್ಟ್ ಲುಕ್ ಎಂದು ಕೆಲವು ಎಡಿಟ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಇದು ಸಿನಿಮಾ ಪೋಸ್ಟರ್ ಅಲ್ಲ ಎಂದು ತಂಡ ಸ್ಪಷ್ಟನೆ ನೀಡಿತ್ತು.

ನಿರ್ದೇಶಕ ಪ್ರಕಾಶ್ ವೀರ್ ಅವರು ಈ ಹಿಂದೆ ‘ಮಿಲನ’, ‘ವಂಶಿ’ ಮೊದಲಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದು ದರ್ಶನ್ ಹಾಗೂ ಪ್ರಕಾಶ್ ಒಟ್ಟಾಗಿ ಕೆಲಸ ಮಾಡುತ್ತಿರುವ ಮೊದಲ ಸಿನಿಮಾ ಅಲ್ಲ. ಈ ಮೊದಲು ‘ತಾರಕ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಈ ಚಿತ್ರ 2017ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಹಲವು ವರ್ಷಗಳ ಬಳಿಕ ‘ಡೆವಿಲ್’ ಚಿತ್ರಕ್ಕಾಗಿ ತಂಡ ಒಂದಾಗಿದೆ. ಸಿನಿಮಾದ ನಾಯಕಿ ಹಾಗೂ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

 

RELATED ARTICLES

Related Articles

TRENDING ARTICLES