Sunday, February 25, 2024

TodayHoroscope: ಈ ರಾಶಿಯವರ ಹಣಕಾಸಿನ ವ್ಯವಹಾರದಲ್ಲಿ ಇಂದು ಜಾಗರೂಕತೆ ಇರಲಿ

ಇಂದು ನಿಮ್ಮ ದಿನ ಭವಿಷ್ಯ ಹೇಗಿರಲಿದೆ.? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ, ವಿದ್ಯಾಭ್ಯಾಸದಲ್ಲಿ ಮರೆವು ಇರುತ್ತದೆ.

ವೃಷಭ: ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಪತ್ರ ವ್ಯವಹಾರದಲ್ಲಿ ಯಶಸ್ಸು, ಅನಾರೋಗ್ಯ ಬರಬಹುದು.

ಮಿಥುನ: ಮಾತಿನಿಂದ ಕಲಹ, ನಿಧಾನದ ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ನಷ್ಟ, ವಾಹನ ಚಾಲನೆಯಲ್ಲಿ ಜಾಗ್ರತೆಯಿಂದ ಇರುತ್ತದೆ.

ಕಟಕ: ದಾಂಪತ್ಯದಲ್ಲಿ ಮೂರನೆಯವರ ಮಧ್ಯಪ್ರವೇಶ, ವ್ಯಾಪಾರ-ವ್ಯವಹಾರದಲ್ಲಿ ಎಳೆದಾಟ, ಸ್ವಾಭಿಮಾನಕ್ಕೆ ಧಕ್ಕೆ, ಮಾನಸಿಕ ತೊಳಲಾಟದಿಂದ ದೈಹಿಕ ಅಸಮರ್ಥತೆ ಇರುತ್ತದೆ.

ಸಿಂಹ: ಸಾಲಗಾರರ ಚಿಂತೆ, ಮಾನಸಿಕ ಅಸಮತೋಲನ, ಅತಿನಿದ್ರೆ, ಅನಗತ್ಯ ಖರ್ಚುಗಳು, ಆಸ್ಪತ್ರೆ ಅಲೆದಾಟವಿರುತ್ತದೆ.

ಕನ್ಯಾ: ಮಕ್ಕಳಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು, ದುಶ್ಚಟಗಳಿಂದ ತೊಂದರೆಯಾಗುವುದು.

ತುಲಾ: ವೃತ್ತಿ ಪ್ರವೃತ್ತಿಯಲ್ಲಿ ಹಿನ್ನಡೆ, ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಭವಿವಿಷ್ಯದ ಚಿಂತೆಯಿಂದ ಬಳಲಿಕೆ ಇರುತ್ತದೆ.

ವೃಶ್ಚಿಕ: ತಂದೆಯಿಂದ ಸಹಾಯ-ಸಹಕಾರ, ಜ್ಞಾನದ ನಿರೀಕ್ಷೆ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರುತ್ತದೆ.

ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರವ್ಯವಹಾರದಲ್ಲಿ ಹಿನ್ನಡೆ, ಅಪಘಾತಗಳು ಇರುತ್ತದೆ.

ಮಕರ: ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ , ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಅನಾರೋಗ್ಯದ ಚಿಂತೆ ಇರುತ್ತದೆ.

ಕುಂಭ: ದೀರ್ಘಕಾಲದ ವ್ಯಾಧಿಗಳು, ಬಾಡಿಗೆದಾರರಿಂದ ಸಮಸ್ಯೆ, ದೂರ ಪ್ರದೇಶಕ್ಕೆ ತೆರಳುವಿರಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ಮೀನ: ಮಕ್ಕಳಿಂದ ಅನುಕೂಲ, ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ, ಹಿರಿಯರಿಂದ ಸಹಾಯ, ಏಕಾಗ್ರತೆಯ ಕೊರತೆ ಸಂಭವಿಸುತ್ತದೆ.

RELATED ARTICLES

Related Articles

TRENDING ARTICLES