Monday, December 23, 2024

ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ

ಬೆಂಗಳೂರು: ಕನ್ನಡದ ಮನರಂಜನಾ ವಾಹಿನಿ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಮಹಿಳೆಯರ ಅಚ್ಚು ಮೆಚ್ಚಿನ ರಿಯಾಲಿಟಿ ಶೋ “ಸುವರ್ಣ ಸೂಪರ್ ಸ್ಟಾರ್” ಗೆ ಇದೀಗ ಸಾವಿರ ಸಂಚಿಕೆಗಳ ಶಸ್ವಿಯಾಗಿ ಪೂರೈಸಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

2020ರಲ್ಲಿ ಕರ್ನಾಟಕದ ಮೂಲೆ ಮೂಲೆಯ ಮಹಿಳೆಯರ ಬದುಕನ್ನು ಸಂಭ್ರಮಿಸಲು ಶುರುವಾದ ಮಹಾವೇದಿಕೆಯಲ್ಲಿ ಪ್ರತಿಭೆ, ಸಾಹಸ, ನಾವು ಯಾರಿಗೂ ಕಮ್ಮಿಯಿಲ್ಲ ಎಂಬ ಛಲ ಹಾಗು ನೊಂದವರಿಗಾಗಿ ಸ್ಫೂರ್ತಿ ನೀಡವ ‘ಸುವರ್ಣ ಸೂಪರ್ ಸ್ಟಾರ್’. ದಿನದಿಂದ ದಿನಕ್ಕೆ ನೋಡುಗರ ಮನಗೆದ್ದು 2ನೇ ಸೀಸನ್ ನೊಂದಿಗೆ ಮುನ್ನುಗ್ಗುತ್ತಿದೆ.

ಈ ಮಹೋನ್ನತ ಕಾರ್ಯಕ್ರಮದ ನಿರೂಪಕಿ ಪ್ರೇಕ್ಷಕರ ನೆಚ್ಚಿನ ನಟಿ ಶಾಲಿನಿ. ಕರ್ನಾಟಕದ ಮೂಲೆ ಮೂಲೆಯಿಂದ ಬಂದ ಮಹಿಳೆಯರ ಜೊತೆ ತಾನು ಒಬ್ಬಳಂತಾಗಿ, ಅವರೊಂದಿಗೆ ಬೆರೆತು, ಬದುಕನ್ನು ಸಂಭ್ರಮಿಸುವುದರ ಜೊತೆ ಇಡೀ ಕರ್ನಾಟಕದ ಮನೆ ಮಂದಿಯ ಮನಸಿನಲ್ಲಿ ಜಾಗ ಪಡೆದು ಕೊಂಡಿದ್ದಾರೆ.

ಇನ್ನು ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಅಂದ್ರೆ ಪ್ರತಿ ದಿನವೂ ಶಾಲಿನಿ ಧರಿಸುವ ವಿಶಿಷ್ಟವಾಗಿ ವಿಭಿನ್ನವಾಗಿ ಡಿಸೈನ್ ಮಾಡಿದ ಬ್ಲೌಸ್‌ಗಳಿಗಂತನೇ ಒಂದಷ್ಟು ಅಭಿಮಾನಿ ವರ್ಗವಿದೆ. ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಸಾವಿರ ಸಂಚಿಕೆಗಳ ಸಂಭ್ರಮದ ಹಬ್ಬದಲ್ಲಿ ನಟಿಯರಾದ ಗಾನವಿ, ಮಾನ್ವಿತಾ ಕಾಮತ್ ಹಾಗು ಶ್ವೇತಾ ಶ್ರೀವಾಸ್ತವ್ ರವರು ಭಾಗಿಯಾಗಿದ್ದು ವೀಕ್ಷಕರಿಗಾಗಿ ಅದ್ಬುತ ಡಾನ್ಸ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ.
ನೀವು ಈ ಕಾರ್ಯಕ್ರಮವನ್ನು ಮೂರು ಗಂಟೆಯ ಮಹಾ ಸಂಭ್ರಮ ಇದೇ ಶನಿವಾರ ಸಂಜೆ 4 ರಿಂದ ರಾತ್ರಿ 7 ಗಂಟೆಯವರೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಬಹುದು.

RELATED ARTICLES

Related Articles

TRENDING ARTICLES