Sunday, December 22, 2024

‘ಶಕ್ತಿ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ : ಮಹಿಳಾ ಭಕ್ತರಿಂದ ದೇಗುಲಗಳ ಖಜಾನೆ ಭರ್ತಿ

ಬೆಂಗಳೂರು : ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಹೀಗಾಗಿ, ದೇವಾಲಯಗಳ ಖಜಾನೆಯೂ ತುಂಬಿ ತುಳುಕುತಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದು 8 ತಿಂಗಳು ಕಳೆಯುತ್ತಿದೆ. ಕಾಂಗ್ರೆಸ್ ಘೋಷಣೆ ಮಾಡಿದ್ದಂತೆ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನ ಜಾರಿಗೊಳಿಸಿದೆ. ಇನ್ನೂ, ಈ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ಶಕ್ತಿ ಯೋಜನೆಗೆ ಸಖತ್ ರೆಸ್ಪಾನ್ಸ್ ಸಿಗ್ತಾ ಇದೆ. ಇದರಿಂದ ರಾಜ್ಯದ ದೇವಾಲಯಗಳ ಖಜಾನೆಯೂ ತುಂಬುತ್ತಿವೆ.

ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದು, ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು ಬೇಟಿ ನೀಡುತ್ತಿದ್ದು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ ಮಠ, ಮೈಸೂರು ಚಾಮುಂಡಿ ಬೆಟ್ಟ ಸೇರಿದಂತೆ ಎಲ್ಲಾ ದೇವಾಲಯಗಳ ಖಜಾನೆ ಭರ್ತಿಯಾಗಿದೆ.

2022ರಲ್ಲಿ ದೇಗುಲಗಳಿಂದ ಸರ್ಕಾರಕ್ಕೆ 230 ಕೋಟಿ ಆದಾಯ ಬಂದಿತ್ತು. ಇದೀಗ, 2023ರಲ್ಲಿ 390 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 150 ಕೋಟಿ ರೂಪಾಯಿ ಆದಾಯ ಹೆಚ್ಚಳವಾಗಿದೆ. ಹಾಗಾದರೆ, ಯಾವೆಲ್ಲಾ ದೇವಾಲಯಗಳಲ್ಲಿ ಎಷ್ಟು ಆದಾಯ ಬಂದಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ದೇವಾಲಯಗಳಿಗೆ ಬಂದ ಆದಾಯ

  • ಕುಕ್ಕೆ ಸುಬ್ರಮ್ಮಣ್ಯ

ಕಳೆದ ವರ್ಷದ ಆದಾಯ : 74 ಕೋಟಿ

ಈ ವರ್ಷದ ಆದಾಯ : 123 ಕೋಟಿ

  • ಕೊಲ್ಲೂರು ಮೂಕಂಬಿಕಾ

ಕಳೆದ ವರ್ಷದ ಆದಾಯ : 31.36 ಕೋಟಿ

ಈ ವರ್ಷದ ಆದಾಯ : 59.47 ಕೋಟಿ

  • ಚಾಮುಂಡೇಶ್ವರಿ ದೇಗುಲ

ಕಳೆದ ವರ್ಷದ ಆದಾಯ : 21.92 ಕೋಟಿ

ಈ ವರ್ಷದ ಆದಾಯ : 52.40 ಕೋಟಿ

  • ಎಡೆಯೂರು ಸಿದ್ದಲಿಂಗೇಶ್ವರ

ಕಳೆದ ವರ್ಷದ ಆದಾಯ : 31.74 ಕೋಟಿ

ಈ ವರ್ಷದ ಆದಾಯ : 36.48 ಕೋಟಿ

  • ಕಟೀಲು ದುರ್ಗಾಪರಮೇಶ್ವರಿ

ಕಳೆದ ವರ್ಷದ ಆದಾಯ : 19.57 ಕೋಟಿ

ಈ ವರ್ಷದ ಆದಾಯ : 32.10 ಕೋಟಿ

  • ನಂಜನಗೂಡು ಶ್ರೀಕಂಠೇಶ್ವರ

ಕಳೆದ ವರ್ಷದ ಆದಾಯ : 18.49 ಕೋಟಿ

ಈ ವರ್ಷದ ಆದಾಯ : 26.71 ಕೋಟಿ

  • ಸವದತ್ತಿ ಯಲಮ್ಮ

ಕಳೆದ ವರ್ಷದ ಆದಾಯ : 10.99 ಕೋಟಿ

ಈ ವರ್ಷದ ಆದಾಯ : 22.52 ಕೋಟಿ

  • ಮಂದಾರ್ತಿ ದುರ್ಗಾಪರಮೇಶ್ವರಿ

ಕಳೆದ ವರ್ಷದ ಆದಾಯ : 31.36 ಕೋಟಿ

ಈ ವರ್ಷದ ಆದಾಯ : 59.47 ಕೋಟಿ

  • ಘಾಟಿ ಸುಬ್ರಹ್ಮಣ್ಯ

ಕಳೆದ ವರ್ಷದ ಆದಾಯ : 7.89 ಕೋಟಿ

ಈ ವರ್ಷದ ಆದಾಯ : 12.25 ಕೋಟಿ

  • ಬೆಂಗಳೂರು ಬನಶಂಕರಿ ದೇವಾಲಯ

ಕಳೆದ ವರ್ಷದ ಆದಾಯ : 5.95 ಕೋಟಿ

ಈ ವರ್ಷದ ಆದಾಯ : 10.58 ಕೋಟಿ

ಒಟ್ನಲ್ಲಿ, ಶಕ್ತಿ ಯೋಜನೆಯು ನಿಜವಾಗಿಯೂ ದೇವಾಲಯಗಳಿಗೆ ಶಕ್ತಿ ತುಂಬಿದ್ದು, ರಾಜ್ಯದ ಪ್ರಮುಖ ದೇವಾಲಯಗಳ ಖಜಾನೆ ಭರ್ತಿಯಾಗುತಿರುವುದಂತು ಸುಳ್ಳಲ್ಲ.

RELATED ARTICLES

Related Articles

TRENDING ARTICLES