Monday, December 23, 2024

2ನೇ ತರಗತಿ ವಿದ್ಯಾರ್ಥಿನಿ ಕಿಡ್ನಾಪ್​ಗೆ ಯತ್ನ : ಖದೀಮನ ಕೈ ಕಚ್ಚಿ ತಪ್ಪಿಸಿಕೊಂಡ ಬಾಲಕಿ

ಬೆಳಗಾವಿ : ವಿದ್ಯಾರ್ಥಿನಿಯನ್ನ ಕಿಡ್ನಾಪ್ ಮಾಡಲು ಹೋಗಿ ವಿಫಲವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

ವಿದ್ಯಾನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ 2ನೇ ತರಗತಿಯ ವಿದ್ಯಾರ್ಥಿನಿಯನ್ನು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಖದೀಮನೋರ್ವ ಕಿಡ್ನಾಪ್ ಮಾಡಲು ಯತ್ನಿಸಿದ್ದಾನೆ.

ಶಾಲೆಯ ಕಂಪೌಂಡ್ ಬಳಿ ಹೊಂಚುಹಾಕಿ ಕುಳಿತಿದ್ದ ಖದೀಮ, ವಿದ್ಯಾರ್ಥಿ ಹೊರಗಡೆ ಬರುತ್ತಿದ್ದಂತೆ ಆಕೆಯ ಮೂಗಿಗೆ ಬಟ್ಟೆಯಿಂದ ಮುಚ್ಚಿ ಅಪಹರಿಸಲು ಪ್ರಯತ್ನಿಸಿದ್ದಾನೆ. ಸುಮಾರು 200 ಮೀಟರ್‌ ತನಕ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿದ್ದಾನೆ.

ಈ ಸುದ್ದಿ ಓದಿದ್ದೀರಾ? : ನಾನು ಅವನಲ್ಲ ‘ಅವಳು’ : ಸಾಲದ ಸುಳಿಗೆ ಸಿಲುಕಿ ಹೆಣ್ಣಾಗಿ ಬದಲಾದ ಗಂಡು

ಬಳಿಕ ಬಾಲಕಿ ಆತನ ಕೈಕಚ್ಚಿ ಶಾಲೆಯ ಆವರಣಕ್ಕೆ ಓಡಿ ಬಂದಿದ್ದಾಳೆ. ಸದ್ಯ, ವಿಷಯ ತಿಳಿಯುತ್ತಿದ್ದಂತೆ ವಿದ್ಯಾನಗರ ಸರ್ಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES