Thursday, May 16, 2024

ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ದೊಡ್ಡಬಳ್ಳಾಪುರ : ತಾಲೂಕಿನ ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮುನಿಆಂಜಿನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯ ನಂತರ ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹನುಮಂತಗೌಡ ಮಾತನಾಡಿ, ಹೈನುಗಾರಿಕೆ ಜೊತೆಗೆ ಗುಣಮಟ್ಟದ ಹಾಲು ಡೈರಿಗೆ ಸರಬರಾಜು ಮಾಡುವುದರಿಂದ ಸಂಘಕ್ಕೆ ಹೆಚ್ಚಿನ ಆದಾಯ ಬರಲಿದೆ ಇದರಿಂದ ಉತ್ಪಾದಕರ ಅಗತ್ಯಗಳನ್ನು ಪೂರೈಸಲು ಸಹಾಯವಾಗಲಿದೆ ಎಂದರು.

ಸಂಘದ ನೂತನ ಅಧ್ಯಕ್ಷ ಮನಿಆಂಜಿನಪ್ಪ ಮಾತನಾಡಿ, ಸಂಘವು ಉತ್ತಮವಾಗಿ ಬೆಳವಣಿಗೆ ಹೊಂದಲು ಎಲ್ಲಾ ನಿರ್ದೇಶಕರು ಪಕ್ಷಾತೀತವಾಗಿ ಸಹಕರಿಸಬೇಕು ಸಂಘದ ಎಲ್ಲಾ ಸದಸ್ಯರ ಸಹಕಾರ ಹಾಗೂ ಗ್ರಾಮದ ಹಿರಿಯ ಮುಖಂಡರ ಬೆಂಬಲ ಸಲಹೆಯನ್ನು ಅನುಸರಿಸಿ ಸಂಘದ ಸರ್ವತೋಮುಖ ಬೆಳೆವಣಿಗೆಗೆ ಶ್ರಮ ವಹಿಸುತ್ತೇನೆ ಎಂದರು.

ಇದನ್ನೂ ಓದಿ: ಮಾಜಿ ಸಿಎಂ HDK ಹೆಸರೇಳಿಕೊಂಡು ಡ್ರೋನ್​ ಪ್ರತಾಪ್ ವಂಚನೆ: ದೂರು ದಾಖಲು

ಮೋಪರಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ 11 ನಿರ್ದೇಶಕ ಸ್ಥಾನವಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನದ ಮುನಿಆಂಜಿನಪ್ಪ ಮತ್ತು ಉಪಾಧ್ಯಕ್ಷ ಸ್ಥಾನದ ಹನುಮಂತಗೌಡ ವಿರುದ್ಧ ಯಾವುದೇ ನಾಮಪತ್ರ ಸಲ್ಲಿಕೆ ಯಾಗದ ಹಿನ್ನೆಲೆಯಲ್ಲಿ ಮನಿ ಆಂಜಿನಪ್ಪ ಅವರು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಹನುಮಂತಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ನಾಗಭೂಷಣ್ ಘೋಷಿಸಿದರು.

ಈ ವೇಳೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಮನಿಆಂಜಿನಪ್ಪ ಹಾಗೂ ಉಪಾದ್ಯಕ್ಷ ಹನುಮಂತಗೌಡ ಅವರನ್ನು ಪ್ರಾಂಶುಪಾಲರಾದ ಡಾ. ಎಂ ಚಿಕ್ಕಣ್ಣ ಗ್ರಾಮದ ಮುಖಂಡರುಗಳು ಅಭಿನಂದಿಸಿದರು.

ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಮಾರಪ್ಪ ಎಂ, ರಾಮಪ್ಪ, ಮುನಿಕೃಷ್ಣ, ಕೃಷ್ಣಪ್ಪ, ನಾರಾಯಣಪ್ಪ ಎಂ , ಭಾಗ್ಯಮ್ಮ, ಅಕ್ಕಯಮ್ಮ, ವೆಂಕಟಲಕ್ಷ್ಮಮ್ಮ, ಅಕ್ಕಯಮ್ಮ, ಗ್ರಾಮದ ಮುಖಂಡರುಗಳು ಹಾಜರಿದ್ದರು.

RELATED ARTICLES

Related Articles

TRENDING ARTICLES