Saturday, May 4, 2024

ವಾಹನಗಳನ್ನ ಅಡ್ಡಗಟ್ಟಿ ಗೂಗಲ್​ ಪೇ ಮೂಲಕ ಹಣ ದರೋಡೆ!

ಮೈಸೂರು : ವಾಹನಗಳನ್ನು ಅಡ್ಡಗಟ್ಟಿ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್​ ಧರೋಡೆಕೋರರನ್ನು ಜಿಲ್ಲೆಯ ಹೆಚ್​.ಡಿ ಕೋಟೆ  ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳನ್ನು ಕೋಳಗಾಲದವರು ಎಂದು ತಿಳಿದುಬಂದಿದೆ. ಇವರು ದರೋಡೆ ವೇಳೆ ಜೇಬಲ್ಲಿ ಹಣವಿಲ್ಲದಿದ್ದರೇ ಗೂಗಲ್ ಪೇ ನಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡು ಪರಾರಿಯಾಗುತ್ತಿದ್ದರು,

ಇದನ್ನೂ ಓದಿ: ಹಿರಿಯ ರಾಜಕಾರಣಿ ಎಲ್​.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಸರ್ಕಾರ!

ಇದೇ ರೀತಿ, ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಲಾರಿ ಅಡ್ಡಗಟ್ಟಿ ಹಣಕ್ಕಾಗಿ ಚಾಲಕನಿಗೆ ಡಿಮ್ಯಾಂಡ್ ಮಾಡಿದ್ದಾರೆ. ಈ ವೇಳೆ ಹಣ ಇಲ್ಲ ಎಂದು ಚಾಲಕ ಹೇಳಿದ್ದಾನೆ. ಬಳಿಕ ಹಣವನ್ನ ಆನ್ ಲೈನ್ ಗೂಗಲ್​ ಪೇ ಮೂಲಕ ಹಣ ಕಳಿಸಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.

ಈ ಕುರಿತು ಹೆಚ್​,ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆನ್ ಲೈನ್ ಮೂಲಕ ಹಣ ವರ್ಗಾವಣೆ ಜಾಡು ಹಿಡಿದು ಹೊರಟ ಪೊಲೀಸರು ಇಬ್ಬರು ಕಿರಾತಕರನ್ನ ಬಂಧಿಸಿದ್ದಾರೆ. ಮತ್ತಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಸದ್ಯ ಹಣ ವಸೂಲಿ ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

RELATED ARTICLES

Related Articles

TRENDING ARTICLES