Monday, May 20, 2024

ಎರಡು ವಿಕೆಟ್ ಪತನ.. ಮತ್ತೊಮ್ಮೆ ನಿರಾಸೆ ಮೂಡಿಸಿದ ರೋಹಿತ್ ಶರ್ಮಾ

ಬೆಂಗಳೂರು : ಇಂಗ್ಲೆಂಡ್​ ವಿರುದ್ದದ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡಿದೆ.

ವಿಶಾಖಪಟ್ಟಣಂ ವೈಜಾಗ್‌ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ.

ನಾಯಕ ರೋಹಿತ್ ಶರ್ಮಾ ಹಾಗೂ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭಾರತದ ಪರ ಇನ್ನಿಂಗ್ಸ್​ ಆರಂಭಿಸಿದರು. ಆದರೆ, ಹಿಟ್​ ಮ್ಯಾನ್ ರೋಹಿತ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. 41 ಎಸೆತ ಎದುರಿಸಿದ ಅವರು ಕೇವಲ 14 ರನ್​ಗಳಿಗೆ ಔಟಾದರು.

ಮೊದಲ ಟೆಸ್ಟ್​ ಪಂದ್ಯದಲ್ಲಿ ರೋಹಿತ್​ 24 ಹಾಗೂ 39 ರನ್​ ಗಳಿಸಿದ್ದರು. ಈ ಇನ್ನಿಂಗ್ಸ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬಶೀರ್ ಬೌಲಿಂಗ್​ನಲ್ಲಿ ಪೋಪೆಗೆ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ ದೊಡ್ಡ ಸ್ಕೋರ್ ಸಿಡಿಸದಿರುವುದು ಉಳಿದ ಬ್ಯಾಟರ್​ಗಳ ಮೇಲೆ ಒತ್ತಡ ಹೆಚ್ಚಿಸಿದೆ.

ಘರ್ಜಿಸಲಿಲ್ಲ ಶುಭ್​ಮನ್ ಗಿಲ್​

ರೋಹಿತ್​ ಶರ್ಮಾ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಶುಭ್​ಮನ್​ ಗಿಲ್​ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. 34 ರನ್​ ಗಳಿಸಿ ಜೇಮ್ಸ್​ ಆಂಡರ್ಸನ್​ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು. ಊಟದ ವಿರಾಮದ ಅಂತ್ಯಕ್ಕೆ ಭಾರತ 31 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 103 ರನ್​ ಗಳಿಸಿದೆ. ಯಶಸ್ವಿ ಜೈಸ್ವಾಲ್ ಅಜೇಯ 51* ಹಾಗೂ ಶ್ರೇಯಸ್​ ಅಯ್ಯರ್ ಅಜೇಯ 4* ರನ್​ ಗಳಿಸಿ ಕ್ರೀಸ್​ ಕಾಯ್ದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES