Sunday, May 19, 2024

ವೈಜ್ಞಾನಿಕ ಅಕಾಡೆಮಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂಗೆ ಮನವಿ!

ಬೆಂಗಳೂರು : ಜನರಲ್ಲಿ ಮೌಢ್ಯತೆಯನ್ನು ನಿವಾರಿಸುವ ಮನೋಭಾವ ಬೆಳೆಸಲು ಕರ್ನಾಟಕ ಸರ್ಕಾರದ ವತಿಯಿಂದ ಮೌಢ್ಯ ಮುಕ್ತ “ವೈಜ್ಞಾನಿಕ ಅಕಾಡಮಿ” ಸ್ಥಾಪಿಸುವ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಿಷತ್ತಿನ ಮುಖಂಡರು ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ನ್ನು ಡಿ. 29, 2020ರಂದು ಸ್ಥಾಪಿಸಿ ರಾಜ್ಯದ ಪ್ರತೀ ಜಿಲ್ಲೆ ತಾಲ್ಲೂಕುವಾರು ಅಧ್ಯಕ್ಷರನ್ನೊಳಗೊಂಡು ಹೋಬಳಿ ಮಟ್ಟದಲ್ಲಿ ಸಮಿತಿಗಳು ಪ್ರಾರಂಭವಾಗಿ ಜನ ಸಾಮಾನ್ಯರು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ. ಮಾನವೀಯ ಮೌಲ್ಯ, ವೈಜ್ಞಾನಿಕ ಕೌಶಲ್ಯ, ಚಿಂತನಾ ಶೀಲತೆ, ಮನಸ್ಸಿನ ಸದೃಢತೆ ಬೆಳಸಲು ಶ್ರಮಿಸುತ್ತಿದೆ.

ಶೈಕ್ಷಣಿಕ, ವೈಜ್ಞಾನಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನಾ ಕಾರ್ಯಕ್ರಮಗಳನ್ನು ರಾಜ್ಯ ಮಟ್ಟದಲ್ಲಿಯೂ ಹಮ್ಮಿಕೊಳ್ಳುತ್ತಾ ಬಂದಿದ್ದು”ವಿಜ್ಞಾನ-ಸಾಹಿತ್ಯ-ಸಂಸ್ಕೃತಿ” ಸಮಾಗಮಗೊಳಿಸಿ ಮಕ್ಕಳಲ್ಲಿ ಮಾನವೀಯತೆ, ಸೌಹಾರ್ದತೆ, ಪ್ರಯೋಗಶೀಲತೆ ಬೆಳೆಸುವುದು ಪರಿಷತ್ತಿನ ಮುಖ್ಯ ಧೈಯವಾಗಿದೆ.

ಇದನ್ನೂ ಓದಿ: CBI, IT, EDಗಳು ಈಗ ಸ್ವಾಯತ್ತ ಸಂಸ್ಥೆಗಳಾಗಿ ಉಳಿದಿಲ್ಲ: ಸಿಎಂ ಸಿದ್ದರಾಮಯ್ಯ 

ವೈಚಾರಿಕ ಚಿಂತಕರ ಚಾವಡಿಯಿಂದ ಬಂದ ತಾವು, ಮೌಡ್ಯತೆ ಕಾನೂನು ಜಾರಿಗೆ ತಂದಿದ್ದು ಅನೇಕ ಮುಗ್ಧ ಜನರಿಗೆ ಅನುಕೂಲವಾಗಿದೆ. ಆದರೆ, ಜನರಲ್ಲಿ ಮುಖ್ಯವಾಗಿ “ಕಾನೂನಿಗಿಂತ ಜಾಗೃತಿ” ಮೂಡಿಸಬೇಕಾದುದು ನಮ್ಮ ಆಶಯ. ಆದ್ದರಿಂದ ಈ ಸಾಲಿನಲ್ಲಿ ನಡೆಯಲಿರುವ ವಿಧಾನ ಸಭೆಯ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ನಮ್ಮ ಮನವಿಯನ್ನು ಚರ್ಚಿಸಿ ಅನುಷ್ಠಾನಕ್ಕೆ ತರಬೇಕಾಗಿ ತಮ್ಮಲ್ಲಿ ಪ್ರಾರ್ಥಸುತ್ತೇವೆ ಎಂದಿದ್ದಾರೆ.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಪ್ರಮುಖ ಬೇಡಿಕೆಗಳು:

1) ಮೌಡ್ಯ ಮುಕ್ತ “ವೈಜ್ಞಾನಿಕ ಅಕಾಡಮಿ” ಸರ್ಕಾರದ ವತಿಯಿಂದ ಸ್ಥಾಪನೆ ಬಗ್ಗೆ ಚರ್ಚಿಸುವುದು.
2) ಪ್ರತೀ ವರ್ಷ ನಡೆಯುವ “ವೈಜ್ಞಾನಿಕ ಸಮ್ಮೇಳನಕ್ಕೆ” 1 ಕೋಟಿ 50 ಲಕ್ಷ ಅನುದಾನ ನೀಡುವುದು.
3) ನಮ್ಮ ಪರಿಷತ್ತಿನ ‘ವಿಜ್ಞಾನ ಸಿರಿ’ ಮಾಸ ಪತ್ರಿಕೆಯನ್ನು ಗ್ರಾಮ ಪಂಚಾಯ್ತಿ ಮತ್ತು ಶಾಲಾ-ಕಾಲೇಜು,       ಗ್ರಂಥಾಲಯಗಳಿಗೆ ಖರೀದಿಸುವಂತೆ ಶಿಕ್ಷಣ ಇಲಾಖೆಗೆ ಆದೇಶ ಮಾಡಿಸುವುದು.
4) ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಬಳಿ 10 ಎಕರೆ ಸ್ಥಳದಲ್ಲಿ 55 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ “ವಿಜ್ಞಾನ ಗ್ರಾಮಕ್ಕೆ” ಪ್ರತೀವರ್ಷ 10 ಕೋಟಿ ಅನುದಾನ ನೀಡುವುದು.
5) ಕಲ್ಯಾಣ ಕರ್ನಾಟಕದಲ್ಲಿ ಮೌಡ್ಯ ಮುಕ್ತ ನಿವಾರಣೆಗೆ “ವೈಜ್ಞಾನಿಕ ವಿಶ್ವ ವಿದ್ಯಾಲಯ” ಸ್ಥಾಪನೆ ಮಾಡುವುದು.

ಸಾರ್ವಜನಿಕರಲ್ಲಿ ಸದಾ ವೈಜ್ಞಾನಿಕ ಜಾಗೃತಿಗೊಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸರ್ಕಾರದ ವತಿಯಿಂದ ಮೌಡ್ಯ ಮುಕ್ತ “ವೈಜ್ಞಾನಿಕ ಅಕಾಡಮಿ” ಸ್ಥಾಪನೆ ಮತ್ತು ಕಲ್ಯಾಣ ಕರ್ನಾಟಕದಲ್ಲಿ ವೈಜ್ಞಾನಿಕ “ವಿಶ್ವ ವಿದ್ಯಾಲಯ” ಸ್ಥಾಪನೆಮಾಡಲು ಅವುಗಳು ಕುರಿತು ಚರ್ಚಿಸಲು ತಮ್ಮಲ್ಲಿ ಪ್ರಾರ್ಥನೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES